HomeGadag Newsನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಕ್ಬರ್‌ಸಾಬ ಬಬರ್ಚಿ ನೇಮಕ

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಕ್ಬರ್‌ಸಾಬ ಬಬರ್ಚಿ ನೇಮಕ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿರಿಯ ಮುಸ್ಲಿಂ ಮುಖಂಡ, ಹಳೆ ಕಬ್ಬಿಣದ ವರ್ತಕರಾಗಿರುವ ಅಕ್ಬರ್‌ಸಾಬ ಬಬರ್ಚಿಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಇವರ ಅಧಿಕಾರಾವಧಿಯಲ್ಲಿ ಗದಗ-ಬೆಟಗೇರಿ ಅವಳಿ ನಗರ ಗಮನಾರ್ಹ ಬದಲಾವಣೆ ಆಗಲಿ ಎಂದು ಗದಗ ಜಿಲ್ಲಾ ಹಳೆ ಕಬ್ಬಿಣದ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಜಕ್ಕಪ್ಪನವರ ಸೇರಿದಂತೆ ಸಂಘದ ಪದಾಧಿಕಾರಿಗಳು, ಮುಖಂಡರು ಶುಭ ಕೋರಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಕಾರ್ಯಾಲಯದಲ್ಲಿ ಅಕ್ಬರ್‌ಸಾಬ ಬಬರ್ಚಿಯವರನ್ನು ಸನ್ಮಾನಿಸಿ ಮಾತನಾಡಿದ ಬಸವರಾಜ ಜಕ್ಕಪ್ಪನವರ, ನಗರದ ಸ್ವಚ್ಛತೆಯಲ್ಲಿ ಗುಜರಿ ಅಂಗಡಿಯವರ ಪಾತ್ರ ಮಹತ್ವದ್ದಾಗಿದೆ. ಒಂದೇ ಸಾಲಿನಡಿ ಗುಜರಿ ವರ್ತಕರಿಗೆ ಮಳಿಗೆಗಳನ್ನು ನಗರಸಭೆ ವಶಪಡಿಸಿಕೊಂಡಿರುವ ವಕಾರ ಸಾಲಗಳಲ್ಲಿ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಲು ಬಬರ್ಚಿಯವರು ಶ್ರಮಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ನಾರಾಯಣ ಯಲ್ಲಪ್ಪ ದೊಡ್ಮನಿ, ಉಮೇಶ ಕದಡಿ, ವಜೀರಸಾಬ ನದಾಫ, ಅನಿಲ ಟಿ.ಇರಕಲ್ಲ, ಸಮೀರ ನದಾಫ, ಪರಶುರಾಮ ಎಚ್.ಕಟ್ಟಿಮನಿ, ಧರ್ಮಪ್ಪ ವೀರಪ್ಪ ಹೊಸಮನಿ, ಅಬ್ದುಲ್ ಅಜೀಜ ನರಗುಂದ, ಮುರಳಿ ಇಲಕಲ್ಲ, ಪೀರಸಾಬ ನದಾಫ, ಸಲೀಂ ಬಬರ್ಚಿ, ರಮೇಶ ಕಾಗಿ, ಚಾಂದಸಾಬ ಬೋದ್ಲೋಖಾನ, ಜಗದೀಶ ಪಲ್ಲೇದ, ಸುರೇಶ ಮ್ಯಾದಾರ, ದೀಪಕ ಇಲಕಲ್ಲ, ಪ್ರವೀಣ ಕಮತರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!