HomeGadag Newsಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕ್ಷೀರಾಭಿಷೇಕ

ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕ್ಷೀರಾಭಿಷೇಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಬಿಜೆಪಿ ಮುಖಂಡ ರಮೇಶ ಸಜ್ಜಗಾರ ಅವರ ನೇತೃತ್ವದಲ್ಲಿ ಕ್ಷೀರಾಭಿಷೇಕ ನಡೆಯಿತು.

ಈ ಸಂದರ್ಭದಲ್ಲಿ ರಮೇಶ ಸಜ್ಜಗಾರ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಯ ಮೂಲಕ ದೇಶದ ಜನರ ವಿಶ್ವಾಸ ಗಳಿಸಿದ್ದಾರೆ. ಭಾರತದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ನರೇಂದ್ರ ಮೋದಿಯವರು ಈ ಬಾರಿ ದೇಶಾದ್ಯಾಂತ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸೀಟುಗಳ ಮೂಲಕ 3ನೇ ಬಾರಿ ಪ್ರಧಾನಮಂತ್ರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಡೊಳ್ಳು ಮೇಳಗಳೊಂದಿಗೆ ಕ್ಷೀರಾಭಿಷೇಕ ಮಾಡಿ ಸಂಕಲ್ಪ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರಾದ ಶಿವು ಡಂಬಳ, ಅಶೋಕ ಕುಡತನಿ, ಉಡಚಪ್ಪ ಹಳ್ಳಿಕೇರಿ, ಶಶಿ ಕಳಸಾಪೂರ, ಶೆಟ್ಟರ, ಮಂಜುನಾಥ ಶಾಂತಗೇರಿ, ದೇವರಾಜ ಆಲೂರ, ವಿರೇಶ ಬೇವಿನಕಟ್ಟಿ, ವಿಜಯ ಸೋಳಂಕೆ, ಹನುಮಂತ ಹಳ್ಳೂರ, ಸೋಮು ಮೇಟಿ, ಮಂಜು ಗಂಗಾತ್ರಿ, ಮಾಂತು ಆಲೂರ, ಶಿವು ಜೋಗಿನ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img