HomeHealth Tipsಯೋಗ ಸೈನ್ಸ್ ತರಬೇತಿಯ ಪ್ರಾರಂಭೋತ್ಸವ

ಯೋಗ ಸೈನ್ಸ್ ತರಬೇತಿಯ ಪ್ರಾರಂಭೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹುಲಕೋಟಿ : ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುವ ಉತ್ತಮ ಶುಶ್ರೂಷಕರಾಗುವುದರೊಂದಿಗೆ ವಯಕ್ತಿಕವಾಗಿಯೂ ಸದೃಢತೆಯನ್ನು ಹೊಂದಿ ಆರೋಗ್ಯಪೂರ್ಣರಾಗಿದ್ದಲ್ಲಿ ನಿಮ್ಮಿಂದ ಸೇವೆ ಪಡೆಯುವ ಪ್ರತಿಯೊಬ್ಬರೂ ಶೀಘ್ರವಾಗಿ ರೋಗಮುಕ್ತರಾಗುತ್ತಾರೆ. ರಾಷ್ಟçಮಟ್ಟದಲ್ಲಿ ಸಾಧನೆಗೈದಿರುವ ಡಾ. ಸತೀಶ್ ಹೊಂಬಾಳೆ ಅವರ ಮಾರ್ಗದರ್ಶನದಿಂದ ಸುದೈವಿಗಳಾದ ನೀವು ಉತ್ತಮ ರೀತಿಯಲ್ಲಿ ಯೋಗಾಭ್ಯಾಸ ಮಾಡಿ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಆಶಿಸಿದರು.

ಇತ್ತೀಚೆಗೆ ಇಲ್ಲಿನ ಕೆ.ಎಚ್. ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ & ಯೋಗಿಕ್ ಸೈನ್ಸಸ್ ಹುಲಕೋಟಿ-ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಹಯೋಗದಲ್ಲಿ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗಾ ಸೈನ್ಸ್ ತರಬೇತಿಯ ಪ್ರಾರಂಭೋತ್ಸವವನ್ನು ಆರ್‌ಎಮ್‌ಎಸ್‌ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಡಿ.ಆರ್. ಪಾಟೀಲ ಮಾತನಾಡಿ, ಹುಲಕೋಟಿಯ ವಾತಾವರಣದಲ್ಲಿ ಯೋಗಾಭ್ಯಾಸ ತರಬೇತಿಯನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು. ಆರ್‌ಎಮ್‌ಎಸ್‌ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗ ತರಬೇತುದಾರ ಪ್ರಭು ಬುರ್ಬುರೆ ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲ ಬಸಯ್ಯ ಹಿರೇಮಠ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img