HomeGadag Newsಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ

ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಹೆಣ್ಣು ಮಕ್ಕಳ ಸಂಪೂರ್ಣ ಸುರಕ್ಷತೆ ಹಾಗೂ ಅವರ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ, ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹವನ್ನು ತಡೆಗಟ್ಟಲು ಮಹಿಳಾ ಸಂಘಟನೆಗಳು ಶ್ರಮಿಸಬೇಕೆಂದು ಸಾಹಿತಿ ಕವಿತಾ ದಂಡಿನ ಹೇಳಿದರು.
ಅವರು ಗದುಗಿನ ಎಸ್.ಎಸ್.ಕೆ ಮಹಿಳಾ ಮಂಡಳಿ ನಗರದ ಜಗದಂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಜಾಗೃತಿ ಕುರಿತು ಮಾತನಾಡಿದರು.
ಮಹಿಳೆಯರು ಹಲವಾರು ತೊಡಕುಗಳನ್ನು ಎದುರಿಸುತ್ತಿದ್ದು, ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಮುಖ್ಯವಾಗಿ ಹೆಣ್ಣು ಮಗುವಿನ ಮಹತ್ವದ ಕುರಿತಾಗಿ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಶಕ್ತಗೊಳಿಸಬೇಕಾಗಿರುವದು ಅವಶ್ಯವೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಎಸ್.ಕೆ ಮಹಿಳಾ ಮಂಡಳಿಯ ಅಧ್ಯಕ್ಷೆ ಉಮಾ ಬೇವಿನಕಟ್ಟಿ, ಮಹಿಳೆಯರು ಗೃಹಕೈಗಾರಿಕೆ ಮೂಲಕ ಸ್ವಯಂ ಉದ್ಯೋಗಕ್ಕೆ ಪ್ರಯತ್ನಿಸಬೇಕು. ಸಾಧನೆಗೆ ಯಾವುದೂ ಅಡ್ಡಿಯಿಲ್ಲ. ಗುರಿಯೊಂದಿಗೆ ಮುನ್ನಡೆದರೆ ಯಶಸ್ವಿಯಾಗಬಹುದು ಎಂದರು.
ವೇದಿಕೆಯ ಮೇಲೆ ಉಪಾಧ್ಯಕ್ಷೆ ಸ್ನೇಹಲತಾ ಕಬಾಡಿ, ಸರೋಜಾ ಟಿಕಾಂನದಾರ, ಪಂಚ ಕಮಿಟಿಯ ವಿನೋದ ಶಿದ್ಲಿಂಗ್, ರೇಖಾ ಖಟವಟೆ ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲಲಿತಾ ಬಾಕಳೆ ಪ್ರಾರ್ಥಿಸಿದರು, ರೇಖಾ ಬೇವಿನಕಟ್ಟಿ ಸ್ವಾಗತಿಸಿದರು, ಸುಶೀಲಾ ದಲಬಂಜನ ನಿರೂಪಿಸಿದರು, ರೇಣುಕಾ ಕಲಬುರ್ಗಿ ವಂದಿಸಿದರು.
ಸುನಂದಾ ಹಬೀಬ, ವಂದನಾ ಶಿದ್ಲಿಂಗ್, ಅಂಬುಬಾಯಿ ಬೇವಿನಕಟ್ಟಿ, ಲಕ್ಷ್ಮಿಬಾಯಿ ಖಟವಟೆ, ಗೀತಾ ಭಾಂಡಗೆ, ಗೀತಾ ಹಬೀಬ, ಕಸ್ತೂರಿ ಭಾಂಡಗೆ ಹಾಗೂ ಮಹಿಳಾ ಮಂಡಳದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅತಿಥಿಯಾಗಿ ಪಾಲ್ಗೊಂಡ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಮಿಡ್‌ಟೌನ್‌ದ ಖಜಾಂಚಿ ರಾಣಿ ಚಂದಾವರಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಯಂ ಉದ್ಯೋಗ ಕೈಗೊಂಡು ಯಶಸ್ವಿ ಉದ್ಯಮಿಯಾಗಿ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕೆಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img