HomeGadag Newsಗುತ್ತಿಗೆದಾರರ ಬೇಡಿಕೆ ಈಡೇರಿಕೆಗೆ ಮನವಿ

ಗುತ್ತಿಗೆದಾರರ ಬೇಡಿಕೆ ಈಡೇರಿಕೆಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮಾರುತಿ ಬ್ಯಾಕೋಡರವರು 4 ತಿಂಗಳು ಕಳೆದರೂ ನಗರಸಭೆಯ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸುತ್ತಿಲ್ಲ ಎಂದು ಗದಗ-ಬೆಟಗೇರಿ ನಗರಸಭೆ ಸಿವ್ಹಿಲ್ ಗುತ್ತಿಗೆದಾರರ ಸಂಘದ ವತಿಯಂದ ಗದಗ-ಬೆಟಗೇರಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಸಂಘ ಅಧ್ಯಕ್ಷ ಆರ್.ಎಫ್. ಹುಣಸೀಮರದ ಮನವಿ ಸಲ್ಲಿಸಿ ಮಾತನಾಡಿ, ನಗರಸಭೆ ಪೌರಾಯುಕ್ತರು ನೀರಿನ ಬಿಲ್, ಕೊಳವೆ ಬಾವಿ, ಯು.ಜಿ.ಡಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಿಲ್ ಕೇಳಿದರೆ ನಾಳೆ ಎನ್ನುತ್ತು ಕಾಲ ಕಳೆಯುತ್ತಿದ್ದಾರೆ. ಇ.ಎಮ್.ಡಿ., ಎಸ್.ಡಿ. ಗುತ್ತಿಗೆದಾರರ ಯಾವ ಕೆಲಸಗಳೂ ಆಗುತ್ತಿಲ್ಲ ಎಂದು ಆರೋಪಿಸಿದರು.

7-09-2024ರಿಂದ 15ನೇ ಹಣಕಾಸು ಟೆಂಡರ್ ಇದ್ದು, ಅದಕ್ಕೆ ಪೌರಾಯುಕ್ತರು ಕಾರ್ಯದೇಶ ಮಾಡಿಲ್ಲ. ಗುತ್ತಿಗೆದಾರರಿಗೆ ಹಂತ ಹಂತವಾಗಿ ಬಿಲ್, ಇ.ಎಮ್.ಡಿ., ಎಸ್.ಡಿ. ನೀಡುವಂತೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎ.ಬಿ. ಕಟಗಿ, ಎಸ್.ಎಸ್. ಹೂಲಿ, ವ್ಹಿ.ಕೆ. ಗುರುಮಠ, ಜಿ.ಎಸ್. ಹಿರೇಮಠ, ಎಂ.ಸಿ. ಶೇಖ, ಬಿ.ಪಿ. ಕಲ್ಮನಿ, ಆರ್.ಎಮ್. ತಡಹಾಳ, ಡಿ.ಆರ್. ಗಾಯಕವಾಡ, ಎಲ್.ಎಸ್. ಮುಳಗುಂದ, ಎಮ್.ಎಚ್. ತೋರಗಲ್, ಕೆ.ಎಂ. ಬಳ್ಳಾರಿ, ಬಿ.ಎನ್. ಗುಡಸಾಲಿ, ಎಸ್.ಎಮ್. ಚಳಗೇರಿ ಸೇರಿದಂತೆ ಗುತ್ತಿಗೆದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img