HomeEducationಸಂತಸದಿಂದ ಪರೀಕ್ಷೆ ಬರೆಯಿರಿ

ಸಂತಸದಿಂದ ಪರೀಕ್ಷೆ ಬರೆಯಿರಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎಲ್ಲಾ ವಿದ್ಯಾರ್ಥಿಗಳೂ ಅತ್ಯಂತ ಸಂತಸದಿಂದ ಬರೆಯಬೇಕು ಎಂದು ಬಾಲಲೀಲಾ ಮಾಹಾಂತ ಶಿವಯೋಗಿ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಹೇಳಿದರು.

ಅವರು ಪಟ್ಟಣದ ಎಸ್‌ಜೆಜೆಎಂ ಪದವಿಪೂರ್ವ ಮಾಹಾವಿದ್ಯಾಲಯದಲ್ಲಿ ಜರುಗುತ್ತಿರುವ 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿ ಮಾತನಾಡಿ, ಪರೀಕ್ಷೆಯನ್ನು ಒಂದು ಹಬ್ಬದಂತೆ ಆಚರಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ, ನಿರ್ಭೀತಿಯಿಂದ ಎದುರಿಸಬೇಕು ಎಂದರು.

ಪರೀಕ್ಷೆ ಮುಗಿದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಅಧೀಕ್ಷಕ ಎಸ್.ಜಿ. ಉಮರ್ಜಿ ಮಾತನಾಡಿ, ಒಟ್ಟು 484 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಗೈರಾಗಿದ್ದು, 479 ಪರೀಕ್ಷೆಗೆ ಹಾಜರಾಗಿದ್ದರು. 235 ವಿದ್ಯಾರ್ಥಿಗಳು ಮತ್ತು 244 ವಿದ್ಯಾರ್ಥಿನಿಯರು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದರು.

ಡಾ. ಎಸ್.ಸಿ. ಚವಡಿ, ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಪಿ.ಎ. ವಂಟಕರ್, ಪ್ರಕಾಶ ಮದ್ದಿನ, ಎಸ್.ಜಿ. ಉಮರ್ಜಿ, ಎಸ್.ಬಿ. ಅಂಗಡಿ, ಆರ್.ಆರ್. ಪಟ್ಟಣ, ಪಿಎಸ್‌ಐ ಲಕ್ಷö್ಮಣ ಗೌಡಿ ಹಾಗೂ ಶಿಕ್ಷಕ ವೃಂದದವರು ಇದ್ದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img