ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಇಲ್ಲಿನ ಶರಣಬಸವೇಶ್ವರ ಜಾತ್ರಾ ಮಹೊತ್ಸವದ ಕೊನೆಯ ದಿನ ಮುಶಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ರಸಮಂಜರಿಯಲ್ಲಿ ಉತ್ಸಾಹದಿಂದ ಸಂಭ್ರಮಿಸಿ, ಕುಣಿದು ಕುಪ್ಪಳಿಸಿದರು. ತಾರಾ ಕಲಾವಿದರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಜ್ಜೆ ಹಾಕಿ ಬುಧವಾರ ಬೆಳಗಿನ ಜಾವದ ತನಕವೂ ಸಂಭ್ರಮ ಪಟ್ಟರು.
ಕಲಾಸಿಂಚನ ಮೆಲೋಡಿಸ್ ಕಲಾ ತಂಡದಿಂದ ಹಾಸ್ಯ ಸಂಗೀತ ಸಿಂಚನ, ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದ ಮೂಲಕ ಜಾತ್ರಾ ಮಹೋತ್ಸಕ್ಕೆ ವರ್ಣರಂಜಿತವಾಗಿ ತೆರೆಬಿದ್ದಿತು. ಹೆಸರಾಂತ ಕಲಾವಿದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಸುರೇಶ ಇಂಚಗೇರಿ, ಮಾಲಾಶ್ರೀ ಗವನಾಳೆ, ಡಿಕೆಡಿ ಪೂಜಾ, ಪ್ರಿಯಾ ಹಾಗೂ ಅಂಕಿತಾ ತಂಡದವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ಜನ ಮನಸೋತರು.
ರಸಮಂಜರಿ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ ಉದ್ಘಾಟಿಸಿದರು. ಪ್ಯಾಟಿಯ ಧರ್ಮರ ಮಠದ ಸಂಕ್ರಪ್ಪಜ್ಜನವರು ಸಾನಿಧ್ಯ ವಹಿಸಿದ್ದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚಂದಪ್ಪ ಗುಡದೂರ, ಅವಿನಾಶ ಸಾಲಮನಿ, ಹಣಮಂತ ಬೇವಿನಮರದ, ಮೌನೇಶ ಅಕ್ಕಸಾಲಿಗರ, ಚಂದ್ರಶೇಖರ ಬೆವಿನಮರದ, ಬಸವರಾಜ ಕೌಜಗೇರಿ, ಮಲ್ಲಿಕಾರ್ಜುನ ಬೇವಿನಮರದ, ಮಹೇಶ ಮೇಟಿ, ರಾಘು ಪತ್ತಾರ, ಪ್ರವೀಣ ಕರ್ಣಿ, ಬಸವರಾಜ ಗುಡದೂರ, ಅಂದಪ್ಪ ಹಾಲಕೇರಿ, ಅಂದಪ್ಪ ತೊಂಡಿಹಾಳ, ಈರಣ್ಣ ಸೂಡಿ, ಶರಣಪ್ಪ ದೊಡ್ಡಮನಿ ಇದ್ದರು.