ಬೆಂಗಳೂರು:- ರಾಜಾಜಿನಗರದ ನವರಂಗ್ ಬಳಿ ಇರುವ ಪಾಲಿಕೆ ಪಾರ್ಕ್‌ನಲ್ಲಿ ಮಲಗಿದ್ದವನ ಮೇಲೆ ಬೃಹತ್ ಮರ ಬಿದ್ದ ಪರಿಣಾಮ 31 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಜರುಗಿದೆ.
ಲಕ್ಷ್ಮಣ್ ಮೃತ ದುರ್ದೈವಿ ಎನ್ನಲಾಗಿದೆ. ಲಕ್ಷ್ಮಣ್ ಪಾಲಿಕೆಯ ಕಸದ ಗಾಡಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಭಾನುವಾರ ಸಂಜೆ ಕೆಎಎಲ್‌ಇ ಮೈದಾನದ ಬಳಿ ಇರುವ ಬಿಬಿಎಂಪಿ ಪಾರ್ಕ್‌ನಲ್ಲಿ ಮಲಗಿದ್ದ ವೇಳೆ ಬೃಹತ್ ಮರ ಬಿದ್ದಿದೆ.
ಮರ ಬಿದ್ದ ಪರಿಣಾಮ ಲಕ್ಷ್ಮಣ್ ಎದೆ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



