ರಾಮನಗರ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕಿಯ ಸಂಬಂಧಿಕನಿಂದಲೇ ಕೊಲೆಯಾಗಿದ್ದು, ಇರ್ಫಾನ್ ಕೊಲೆಯ ಆರೋಪಿಯಾಗಿದ್ದಾನೆ.
Advertisement
ಆರೋಪಿ ಇರ್ಫಾನ್ ಬೆಂಗಳೂರಿನ ಕಾಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಬಾಲಕಿಯನ್ನು ಪುಸಲಾಯಿಸಿ ಸಂಬಂಧಿಕರ ಮನೆ ಮಾಗಡಿಯಿಂದ ಭಾನುವಾರ ಕರೆದುಕೊಂಡು ಹೋಗಿದ್ದನು.
ಮೃತ ಬಾಲಕಿಯ ಪೋಷಕರು ಆರೋಪಿಗಾಗಿ ಹುಡುಕಾಟ ನಡೆಸಿ, ನಂತ್ರ ಮಾಗಡಿ ಪೊಲೀಸರಿಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿಕೊಂಡ ಮಾಗಡಿ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯ ವಿರುದ್ಧ ಇಂದು ಮಾಗಡಿ ಟೌನ್ ನಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರಿಂದ ಪ್ರತಿಭಟನೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಮಾಗಡಿ ತಹಸೀಲ್ದಾರ್ ಅವರಿಗೆ ಮನವಿ ನೀಡಿದ್ದಾರೆ.