ಬಾಗಲಕೋಟೆ:- ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ಜರುಗಿದೆ.
Advertisement
55 ವರ್ಷದ ಲಕ್ಷ್ಮಣ ವಡ್ಡರ್, 45 ವರ್ಷದ ಬೈಲಪ್ಪ ಬಿರಾದಾರ್, 50 ವರ್ಷದ ರಾಮಣ್ಣ ನಾಯಕ, ಚಾಲಕ 25 ವರ್ಷದ ರಫಿಕ್ ಮುಲ್ಲಾ ಎಂಬ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತರು, ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಕಾರು ಮುದ್ದೇಬಿಹಾಳದ ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ತೆರಳಿತ್ತು. ನಿದ್ದೆ ಮಂಪರಿನಿಂದ ಕ್ಯಾಂಟರ್ಗೆ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಕ್ಯಾಂಟರ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.