ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ಸಂಪ್ರದಾಯದಂತೆ ಕಡುಬಿನ ಕಾಳಗ ಕಾರ್ಯಕ್ರಮ ಸಾವಿರಾರು ಭಕ್ತರ ಜಯಘೋಷದ ನಡುವೆ ಶೃದ್ಧಾ ಭಕ್ತಿ ಮತ್ತು ಅದ್ದೂರಿಯಾಗಿ ನೆರವೇರಿತು.
Advertisement
ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕುದರೆಯ ಮೇಲೇರಿ ರಥ ಪ್ರದಕ್ಷಿಣೆ ಹಾಕುತ್ತಾ ಕಡುಬಿನ ಕಾಳಗ ಕಾರ್ಯ ನೆರವೇರಿಸಿದರು. ಶ್ರೀ ಮಠದ ಪ್ರಾಂಗಣ, ರಥ ಬೀದಿಯುದ್ದಕ್ಕೂ ಕುದರೆ ಮೇಲೆ ಕುಳಿತು ಕಡುಬಿನ ಚೂರುಗಳು, ಬೆಂಡು, ಬತ್ತಾಸು, ಬೆಲ್ಲ, ಹಣ್ಣು, ಕಲ್ಲುಸಕ್ಕರೆ, ಉತ್ತತ್ತಿಗಳನ್ನು ಭಕ್ತರತ್ತ ಅತ್ಯಂತ ಉತ್ಸಾಹದಿಂದ ಎಸೆದರು. ಬಾಲೇಹೊಸೂರ ಸೇರಿ ಸುತ್ತಲಿನ ಗ್ರಾಮಗಳ ಅಪಾರ ಭಕ್ತ ಸಮೂಹ ಪ್ರಸಾದದ ಭಾವನೆಯಿಂದ ಆಯ್ದು ಭಕ್ತಿಯಿಂದ ಸ್ವೀಕರಿಸಿದರು.
ಶ್ರೀಮಠದ ಜಾತ್ರಾ ಸಮಿತಿಯವರು, ಗ್ರಾಮದ ಮುಖಂಡರು, ಯುವಕರು ಪಾಲ್ಗೊಂಡು ಸಹಕರಿಸಿದರು.