ಸಂಭ್ರಮದ ಪಲ್ಲಕ್ಕಿ ಉತ್ಸವ

0
pallakki utsava
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಭಾರತ ಹುಣ್ಣಿಮೆ ಅಂಗವಾಗಿ ಸ್ಥಳೀಯ ಚಿಕ್ಕೊಪ್ಪದವರ ಜಮೀನನಲ್ಲಿ ಇರುವ ಹುಲಗೆಮ್ಮ ದೇವಿ ದೇವಸ್ಥಾನದಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಸಡಗರ-ಸಂಭ್ರಮದೊಂದಿಗೆ ಜರುಗಿತು.

Advertisement

ಬೆಳಗ್ಗೆ 7 ಗಂಟೆಗೆ ದೇವಿಯ ಮೂರ್ತಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಸೇರಿದ ಭಕ್ತಾದಿಗಳು ದೇವಿಯ ಪಲ್ಲಕ್ಕಿಯನ್ನು ಹೊತ್ತು ಆರಾಧಿಸಿದರು.

ಈ ಸಂದರ್ಭದಲ್ಲಿ ಊರಿನ ಹುಲಗೆಮ್ಮ ದೇವಿಯ ಭಕ್ತಾದಿಗಳು ದೇವಿಗೆ ತಮ್ಮ ತಮ್ಮ ಮನೆಗಳಿಂದ ತಂದ ನೈವೇದ್ಯದ ಪ್ರಸಾದವನ್ನು ಸಲ್ಲಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು. ಊರಿನ ಮಹಿಳೆಯರು ಹಾಗೂ ಭಕ್ತಾದಿಗಳೆಲ್ಲ ಪಾಲ್ಗೊಂಡು ದೇವಿಯ ಭಕ್ತಿಗೆ ಶರಣದಾದರು.


Spread the love

LEAVE A REPLY

Please enter your comment!
Please enter your name here