ಕನ್ನಡ ನಾಡಿಗೆ ನಿರಾಶಾದಾಯಕ ಬಜೆಟ್

0
A disappointing budget for Kannada Nadu
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಕನ್ನಡ ನಾಡಿಗೆ ನಿರಾಶಾದಾಯಕವಾಗಿದ್ದು, ಯಾವುದೇ ಮಹತ್ವದ ಯೋಜನೆಗಳು ರಾಜ್ಯಕ್ಕೆ ಸಿಕ್ಕಿಲ್ಲ ಎಂದು ಖನಿಜ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

Advertisement

ಅವರು ಈ ಬಗ್ಗೆ ಮಾತನಾಡಿ, ರಾಜ್ಯವು ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂಬುದನ್ನು ಕೇಂದ್ರ ಸರಕಾರ ಮರೆತಂತಿದೆ. ರಾಜ್ಯದ ಜನತೆಯ ಹಲವಾರು ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸುವುದು ಕೇಂದ್ರ ಸರಕಾರದ ಕರ್ತವ್ಯವೂ ಹೌದು. ಹಿಗಿದ್ದರೂ ಸಹ ಬಜೆಟ್‌ನಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ ಎಂದ ಅವರು, ನಾಡಿನ ಸಂಸದರು ಪಕ್ಷಾತೀತವಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ರಾಜ್ಯದಲ್ಲಿ ರೈಲು ಯೋಜನೆಗಳಿಗೆ ಪ್ರಗತಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಗಮನ ಹರಿಸಿಲ್ಲ. ಅಲ್ಲದೆ ನೀರಾವರಿ ಯೋಜನೆಗಳ ಬಗ್ಗೆಯೂ ಯಾವುದೇ ಯೋಜನೆಗಳಿಲ್ಲ.

ಮುಖ್ಯವಾಗಿ, ಮಹದಾಯಿ ವಿಷಯ ಕೂಡ ಪ್ರಸ್ತಾಪವಾಗದಿರುವುದು ದುರಂತ. ಒಟ್ಟಿನಲ್ಲಿ ಇದೊಂದು ನಮ್ಮ ನಾಡಿಗೆ ನಿರಾಶಾದಾಯಕ ಬಜೆಟ್ ಆಗಿದೆ ಎಂದ ಅವರು, ನಮ್ಮ ರಾಜ್ಯದ ಸರ್ವ ಸಂಸದರು ಹೆಚ್ಚಿನ ಅನುದಾನವನ್ನು ತರುವ ಮೂಲಕ ನಾಡಿನ ಜನರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here