ಬಾಗಲಕೋಟೆ:-ಕುಡಿದ ಮತ್ತಲ್ಲಿ ಸ್ನೇಹಿತರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಜರುಗಿದೆ. 32 ವರ್ಷದ ಮಾಲತೇಶ್ ದಾಸಪ್ಪನವರ ಮೃತ ದುರ್ದೈವಿ. ಚಿನ್ನಪ್ಪ ಬೆಣ್ಣೂರು ಕೊಲೆ ಆರೋಪಿ.
Advertisement
ಮೃತ ಮಾಲತೇಶನ ಕಾರನ್ನು ಚಿನ್ನಪ್ಪ ಮಾರಾಟ ಮಾಡಿಸಿದ್ದ. ಬಂದ ಹಣವನ್ನು ಮಾಲತೇಶನಿಗೆ ಕೊಟ್ಟಿರಲಿಲ್ಲ ಎಂಬ ಆರೋಪವಿದ್ದು, ಹಣ ಕೊಡು ಎಂದು ಕೇಳಿದಾಗ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.