Home Gadag News ಧರೆಗುರುಳಿದ ಅರಳಿ ಮರ; ತಪ್ಪಿದ ಅನಾಹುತ

ಧರೆಗುರುಳಿದ ಅರಳಿ ಮರ; ತಪ್ಪಿದ ಅನಾಹುತ

0
ಧರೆಗುರುಳಿದ ಅರಳಿ ಮರ; ತಪ್ಪಿದ ಅನಾಹುತ
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದ ಬಂಡಿಹಾಳ ಓಣಿಯಲ್ಲಿ ಸುಮಾರ 50 ವರ್ಷಗಳಿಂದ ಬೆಳೆದು ನಿಂತಿದ್ದ ಅರಳಿ ಮರವೊಂದು ಮನೆಯ ಮೇಲೆ ಬಿದ್ದಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಯ ತಗಡು ಮುರಿದುಹೋಗಿದ್ದು, ಬೈಕ್ ಒಂದು ಸಂಪೂರ್ಣ ಹಾನಿಗೊಳಗಾಗಿದೆ. ನಿತ್ಯವೂ ಚಿಕ್ಕ ಮಕ್ಕಳು ಇದೇ ಮರದ ಕೆಳಗೆ ಆಟವಾಡುತ್ತಿದ್ದರು. ಶ್ರೀಧರ ಮಾಹದೇವಪ್ಪ ಉಪ್ಪಾರ ಎಂಬ 13 ವರ್ಷದ ಹುಡುಗನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಯೋಗೇಶ ಕುರಹಟ್ಟಿ, ಬಡವಾಣೆಯ ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ನಾಗಪ್ಪ ಜವಳತೋಟದ, ಶಿವು ಮಠದ, ಶರಣು ಬಂಡಿಹಾಳ, ಧರ್ಮಣ್ಣ ತಳವಾರ ಭೇಟಿ ನೀಡಿ ಪರಿಶೀಲಿಸಿದರು.


Spread the love

LEAVE A REPLY

Please enter your comment!
Please enter your name here