ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದ್ದು, ಮದುವೆ ಯಾಗುವುದಾಗಿ ನಂಬಿಸಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮೋಸ ಮಾಡಿದ್ದಾನೆ. ಮೊಹಮ್ಮದ್ ಎಂಬ ಯುವಕ ಇನ್‌ಸ್ಟಾಗ್ರಾಂ ಮೂಲಕ ಹಿಂದೂ ಯುವತಿಗೆ ಗಾಳ ಹಾಕಿ, ಪ್ರೀತಿಸಿ ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾನೆ.
ಈ ಬಗ್ಗೆ ಯುವತಿ HSR ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಮಹಮ್ಮದ್ ಇಶಾಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನಿಗೆ ಈಗ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ನಡೆದಿದೆ ಎಂದು ಆರೋಪಿಸಲಾಗಿದ್ದು, ಪ್ರಕರಣವೀಗ ಲವ್ ಜಿಹಾದ್ ರೂಪ ಪಡೆದುಕೊಂಡಿದೆ.
ಇನ್ಸ್ಟಾದಲ್ಲಿ ಲವ್ ಆದ ಬಳಿಕ 2024ರ ಅಕ್ಟೋಬರ್ 30ರಂದು ಥಣಿಸಂದ್ರದ ಮಾಲ್ನಲ್ಲಿ ಇಬ್ಬರು ಭೇಟಿಯಾಗಿದ್ದರಂತೆ. ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ಆತ ನಂಬಿಸಿದ್ದ ಎಂದು ಯುವತಿ ದೂರಿದ್ದಾಳೆ. ಅಂದೇ ದಾಸರಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದ. ಮದುವೆ ಆಗ್ತೇನೆ ಎಂದು ನಂಬಿಸಿ ಪದೇ ಪದೇ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಸಂತ್ರಸ್ತ ಯುವತಿ ಆರೋಪ ಮಾಡಿದ್ದಾಳೆ.



