ವಿಜಯಸಾಕ್ಷಿ ಸುದ್ದಿ, ಹೊಂಬಳ : ಸುಮಾರು 20-25 ವರ್ಷಗಳಿಗೂ ಹೆಚ್ಚು ಕಾಲ ನಡೆಯದೇ ಇದ್ದ ಹೊಂಬಳ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ, ಶ್ರೀ ದುರ್ಗಾದೇವಿ, ಶ್ರೀ ಲಕ್ಕಮ್ಮದೇವಿ ಜಾತ್ರೆಯು ಏ.22ರಿಂದ ದೇವಿಯರ ನವೀಕೃತ ವಿಗ್ರಹಗಳ ಮೆರವಣಿಗೆಯೊಂದಿಗೆ ಪ್ರಾರಂಭವಾಗಿ, ಏ. 23, 24ರಂದು ದ್ಯಾಮವ್ವನ ಕಟ್ಟೆಯಲ್ಲಿ ನಾಡಿನ ಒಳಿತಿಗಾಗಿ ಪ್ರಾರ್ಥನೆ ನಂತರ ಸಾರ್ವತ್ರಿಕ ದರ್ಶನ, ಏ.25ರಂದು ಅಮ್ಮನವರ ಪುರ ಪ್ರವೇಶದ ಸಂದರ್ಭದಲ್ಲಿ ಅದ್ದೂರಿ ಭಂಡಾರ ಜಾತ್ರೆಯು ಜರುಗಿ, ಅಮ್ಮನವರ ಮೂಲ ದೇವಾಲಯದಲ್ಲಿ ಪ್ರತಿಷ್ಟಾಪನೆ ನಂತರ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ಜಾತ್ರೆಯು ಸಂಪನ್ನಗೊಂಡಿತು.
Advertisement
ಗುರುವಾರ ಜರುಗಿದ ಭಂಡಾರ ಜಾತ್ರೆಯಲ್ಲಿ ಹೊಂಬಳ ಗ್ರಾಮದ ಭಕ್ತಾದಿಗಳು ಸಡಗರ, ಭಕ್ತಿ, ಅತ್ಯುತ್ಸಾಹದಿಂದ ಪಾಲ್ಗೊಂಡರು. ಗ್ರಾಮ ದೇವತೆಯರ ವೈಶಿಷ್ಟ್ಯಪೂರ್ಣ ಜಾತ್ರಾ ಮಹೋತ್ಸವಕ್ಕೆ ಸಹಕರಿಸಿದ ಸರ್ವರಿಗೂ ಮಹೇಶ ಲಿಂಗದಾಳ ಕೃತಜ್ಞತೆ ಸಲ್ಲಿಸಿದ್ದಾರೆ.