ಬಿಗ್ ಬಾಸ್ ಸೀಸನ್ 11 ಒಂದಲ್ಲ ಒಂದು ರೀತಿಯಲ್ಲಿ ವೀಕ್ಷಕರಿಗೆ ಮನರಂಜನೆ ಕೊಡುತ್ತಿದೆ. ಇಷ್ಟು ದಿನ ಜಗದೀಶ್ ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಾ ಫುಲ್ ಕಂಟೆಂಟ್ ಅವರೇ ಕೊಡುತ್ತಿದ್ದರು. ಆದರೆ ಹೆಣ್ಣು ಮಕ್ಕಳಿಗೆ ನಿಂದಿಸಿದ ಕಾರಣಕ್ಕಾಗಿ ಬಿಗ್ ಬಾಸ್ ಅವರನ್ನು ಮನೆಯಿಂದ ಹೊರಗೆ ಕಳಿಸಿತ್ತು.
ಇದಾದ ಬಳಿಕ ಐಶ್ವರ್ಯ, ಹಾಗೂ ಶಿಶಿರ್ ಫುಲ್ ಹೈಲೈಟ್ ಆಗಿದ್ದಾರೆ. ಅದು ರೊಮ್ಯಾನ್ಸ್ ಮೂಲಕ ಅನ್ನೋದು ವಿಶೇಷ.
ಎಸ್, ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಮೊದಲ ದಿನದಿಂದಲೂ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಈಗ ಅವರ ರೊಮ್ಯಾನ್ಸ್ ವಿಚಾರ ಸಾಕಷ್ಟು ಚರ್ಚೆ ಆಗಿದೆ.
ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್ಶೀಟ್ ಹೊತ್ತು ಕುಳಿತಿದ್ದಾರೆ. ಐಶ್ವರ್ಯಾ ಅವರ ಕೈಯಲ್ಲಿ ಕಪ್ ಇತ್ತು. ಅದರಲ್ಲಿ ಇದ್ದ ಬಿಸಿ ಕಾಫಿಯನ್ನು ಒಬ್ಬರಾದ ಬಳಿಕ ಒಬ್ಬರು ಹೀರಿದ್ದಾರೆ. ಅಕ್ಟೋಬರ್ 18ರ ಎಪಿಸೋಡ್ನಲ್ಲಿ ಈ ದೃಶ್ಯಗಳು ಹೈಲೈಟ್ ಆಗಿದೆ.
ಐಶ್ವರ್ಯಾ ಅವರಿಗೆ ಶಿಶಿರ್ ಅಂತರ ಇಟ್ಟುಕೊಂಡು ಕಿಸ್ ಕೊಟ್ಟಿದ್ದಾರೆ. ಇದರಿಂದ ಇವರು ಕ್ಲೋಸ್ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ರಿಯಲ್ ಲೈಫ್ನಲ್ಲಿ ಸಿಂಗಲ್ ಆಗಿದ್ದಾರೆ. ಹೀಗಾಗಿ, ಬಿಗ್ ಬಾಸ್ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಐಶ್ವರ್ಯಾ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದಾಗ ಮೊದಲು ಧರ್ಮ ಜೊತೆ ಕ್ಲೋಸ್ ಆಗೋಕೆ ಬಯಿಸಿದ್ದರು. ಆದರೆ, ಇದಕ್ಕೆ ಅನುಷಾ ರೈ ಅವಕಾಶ ನೀಡಿರಲಿಲ್ಲ. ಹೀಗಿರುವಾಗಲೇ ಶಿಶಿರ್ ಹಾಗೂ ಐಶ್ವರ್ಯಾ ಕ್ಲೋಸ್ ಆಗಿದ್ದಾರೆ.
ಹೈಲೈಟ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವೊಮ್ಮೆ ಲವ್ ನಾಟಕ ಆಡೋದು ಇದೆ. ‘ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿರೋದು ಈಗ ಅಂಥದ್ದೇ ಪ್ರೀತಿಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.