ವಿಜಯಪುರ : ಸಿದ್ದರಾಮಯ್ಯ ವಿರುದ್ಧ ಎರಡು ಕಡೆ ವಿ.ಸೋಮಣ್ಣರನ್ನ ನಿಲ್ಲಿಸಿ ಬಲಿಪಶು ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರ ನೇಮಕ ಬಳಿಕ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ‘ಸೋಮಣ್ಣ, ಸಿ.ಟಿ.ರವಿ, ಯತ್ನಾಳ್ ಸೇರಿ ಹಲವರು ಅಸಮಾಧಾನಗೊಂಡಿದ್ದಾರೆ. ಬಿಜೆಪಿಯಲ್ಲಿ ಅಸಮಾಧಾನ ಹಿನ್ನಲೆ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ವಿಚಾರದ ಕುರಿತು ‘ಸಿಎಂ, ಡಿಸಿಎಂ, ಸತೀಶ್, ನನ್ನನ್ನು ಸಾಕಷ್ಟು ನಾಯಕರು ಸಂಪರ್ಕಿಸಿದ್ದಾರೆ. ಕಾದುನೋಡಿ ಲೋಕಸಭಾ ಚುನಾವಣೆ ಹೊತ್ತಿಗೆ ಅಥವಾ ನಂತರ ದೇಶ, ರಾಜ್ಯದಲ್ಲಿ ಬಹಳಷ್ಟು ಬದಲಾವಣೆ ಆಗುತ್ತವೆ.
ಇನ್ನು ಇದೇ ವೇಳೆ ಲಿಂಗಾಯತ, ಒಕ್ಕಲಿಗರಿಂದ ಜಾತಿಗಣತಿ ವರದಿ ಮಂಡನೆಗೆ ವಿರೋಧ ‘ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಬಳಿಕ ನನ್ನ ಅಧಿಕೃತ ನಿಲುವು ಸ್ಪಷ್ಟಪಡಿಸುತ್ತೇನೆ.
ಇನ್ನುಳಿದಂತೆ ಜಾತಿಗಣತಿ ವರದಿ ಮಂಡನೆಯಿಂದ ಜಾತಿಗಳ ನಡುವೆ ಸಂಘರ್ಷ ವಿಚಾರ ‘ಅದು ಏನೇ ಇದ್ದರೂ ಪಕ್ಷ ಹಾಗೂ ಸರ್ಕಾರದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ ಎಂದರು.