ಕೋಲಾರ: ಪತ್ನಿ ಕಾಣೆಯಾಗಿದ್ದಕ್ಕೆ ಮನನೊಂದು ಮಗಳನ್ನ ಕೊಂದು, ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಸಮೀಪದ ಪಿ.ಯು ಕಾಲೇಜು ಎದುರು ನಡೆದಿದೆ.
Advertisement
ಲೋಕೇಶ್ (37) ಆತ್ಮಹತ್ಯೆಗೆ ಶರಣಾದ ತಂದೆಯಾಗಿದ್ದು, ಮಗಳು ನಿಹಾರಿಕ (5)ಳನ್ನು ಉಸಿರು ಗಟ್ಟಿಸಿ ಕೊಲೆಗೈದಿರುವ ಶಂಕೆಯಾಗಿದೆ. ಮನೆಯಿಂದ ಹೊರಗೆ ಹೋಗಿ, ಪತ್ನಿ ನವ್ಯಶ್ರಿ ಕಾಣೆಯಾಗಿದ್ದರು.
ಇದರಿಂದ ಮನನೊಂದು ಮಗಳ ಶವ ಕಾರಲ್ಲಿಟ್ಟು, ಮರಕ್ಕೆ ನೇಣು ಬಿಗಿದುಕೊಂಡು ಲೋಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


