ಯುವತಿಯ ಖಾಸಗಿ ಭಾಗ ಮುಟ್ಟಿ ಕಾಮುಕರ ಅಸಭ್ಯ ವರ್ತನೆ: FIR ದಾಖಲು!

0
Spread the love

ಬೆಂಗಳೂರು:- ಯುವತಿಯ ಖಾಸಗಿ ಭಾಗ ಮುಟ್ಟಿ ಕಾಮುಕರು ಅಸಭ್ಯ ವರ್ತನೆ ತೋರಿರುವ ಘಟನೆ ನಗರದ ಹೆಣ್ಣೂರು ಮುಖ್ಯ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಜರುಗಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಯುವತಿಯು, ತನ್ನ ಸ್ನೇಹಿತರ ಮನೆಯಿಂದ ಬೆಳಗ್ಗಿನ ಜಾವ 4.30 ರ ವೇಳೆ ಸ್ಕೂಟರ್​ನಲ್ಲಿ ಹೊರಟ್ಟಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಕೂಟರ್ ಹಿಂಬಾಲಿಸಿಕೊಂಡು ಬಂದಿದ್ದು, ಅಡ್ಡ ಹಾಕಿ ಖಾಸಗಿ ಭಾಗ ಟಚ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಕಾಮುಕರನ್ನ ಹಿಡಿಯಲು ಬಂದ ಸಾರ್ವಜನಿಕರಿಗೆ ಚಾಕು ತೋರಿಸಿ ಪರಾರಿಯಾಗಿದ್ದಾರೆ.

ಸದ್ಯ ಬಾಣಸವಾಡಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here