Home Karnataka News ರಾಮನವಮಿ ಅಂಗವಾಗಿ ಮಂತ್ರಾಲಯದಲ್ಲಿ ಮಹಾಭಿಷೇಕ: ಮೂಲ ರಾಮದೇವರಿಗೆ ವಿಶೇಷ ಪೂಜೆ!

ರಾಮನವಮಿ ಅಂಗವಾಗಿ ಮಂತ್ರಾಲಯದಲ್ಲಿ ಮಹಾಭಿಷೇಕ: ಮೂಲ ರಾಮದೇವರಿಗೆ ವಿಶೇಷ ಪೂಜೆ!

0
ರಾಮನವಮಿ ಅಂಗವಾಗಿ ಮಂತ್ರಾಲಯದಲ್ಲಿ ಮಹಾಭಿಷೇಕ: ಮೂಲ ರಾಮದೇವರಿಗೆ ವಿಶೇಷ ಪೂಜೆ!
Spread the love

ರಾಯಚೂರು:- ರಾಮನವಮಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಅವರು ಶ್ರೀ ಬ್ರಹ್ಮ ಕರಾರ್ಚಿತ ಮೂಲ ರಾಮದೇವರು ಸೇರಿದಂತೆ ಸಂಸ್ಥಾನ ಮೂರ್ತಿಗಳಿಗೆ ಮಹಾಭಿಷೇಕ ನೆರವೇರಿಸಿದರು. ಬಳಿಕ ಮೂಲ ರಾಮದೇವರು, ದಿಗ್ವಿಜಯ ರಾಮದೇವರು ಹಾಗೂ ಜಯರಾಮದೇವರುಗಳಿಗೆ ಗಂಧ ಲೇಪನ ಅರ್ಪಿಸಿ ಸಂಸ್ಥಾನ ಪೂಜೆ ನಡೆಸಲಾಯಿತು.

ಈ ಮಹಾಭಿಷೇಕವು ಮಠದಲ್ಲಿ ಅಪರೂಪದ ಹಾಗೂ ಮಹತ್ವದ ಆಚರಣೆಯಾಗಿದ್ದು, ವರ್ಷದಲ್ಲಿ ಎರಡು ಬಾರಿ ಮಾತ್ರ—ಶ್ರೀರಾಮನವಮಿ ಹಾಗೂ ಬಲಿ ಪಾಡ್ಯಮಿಯಂದು—ನಡೆಯುತ್ತದೆ.

ಇದೀಗ ಶ್ರೀರಾಮನವಮಿ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ರಾಯಚೂರು ನಗರದಲ್ಲೂ ಹಬ್ಬದ ಸಂಭ್ರಮ ಕಳೆಯಿದ್ದು, ರಾಮ ಮಂದಿರ, ಕೋದಂಡರಾಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.

 


Spread the love

LEAVE A REPLY

Please enter your comment!
Please enter your name here