ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ : ಈರಪ್ಪ ರಿತ್ತಿ

0
A peace meeting called on the occasion of Muharram
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣವು ಸದಾ ಸೌಹಾರ್ದತೆಯಿಂದ ಸಾಗಿ ಬಂದು ಈ ಭಾಗದಲ್ಲಿಯೇ ಭಾವೈಕ್ಯತೆಯ ನಗರವಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಆಚರಿಸುವ ಮೊಹರಂ ಹಬ್ಬವನ್ನು ಎಂದಿನಂತೆ ಶಾಂತಿಯುತವಾಗಿ ಆಚರಿಸಿ ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

Advertisement

ಅವರು ರವಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಇಲ್ಲಿ ಜಾತಿ, ಮತವೆನ್ನದೇ ಒಗ್ಗಟ್ಟಾಗಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಪಟ್ಟಣದ ಜನ ಶಾಂತಿ, ಸೌಹಾರ್ತತೆಗೆ ವಿಶೇಷವಾದ ಒತ್ತು ನೀಡುತ್ತಿರುವುದು ಶ್ಲಾಘನೀಯ. ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಮುಂಬರುವ ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತು, ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ಪಟ್ಟಣದದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಸಭೆಯಲ್ಲಿ ಪಟ್ಟಣದ ಪ್ರಮುಖರಾದ ಮಹೇಶ ಹೊಗೆಸೊಪ್ಪಿನ, ಪೂರ್ಣಾಜಿ ಖರಾಟೆ, ಸುರೇಶ ನಂದೆಣ್ಣವರ, ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಎಂ.ಗದಗ ಸೇರಿದಂತೆ ಅನೇಕರು ಮಾತನಾಡಿದರು.

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ವಿ.ಜಿ. ಪವಾರ, ದೂದ ನಾನಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಸಾಬ್ ಕಣಕೆ, ದಾದಾಪಿರ ಕಾರಡಗಿ, ಅನಿಲ ಮುಳಗುಂದ, ಮಾಬುಸಾಬ್ ಮುಳುಗುಂದ, ವೀರಭದ್ರಪ್ಪ ಅರಿಶಿಣದ, ಗಂಗಾಧರ ಸೂರಣಗಿ, ಬಸವರಾಜ ಕಲ್ಲೂರ, ಶಿವಾನಂದ ಲಿಂಗಶೆಟ್ಟಿ, ಜಿಲಾನಿ ಶಿದ್ದಿ, ರಮೇಶ ಹಂಗನಕಟ್ಟಿ, ಜಹಿರಅಹ್ಮದ ಸಿದ್ದಾಪುರ, ನೂರಅಹ್ಮದ ನಿಡಗುಂದಿ, ನೂರಅಹ್ಮದ ಮಕಾನದಾರ, ಮಹಮ್ಮದರಫೀಕ ಸಿದ್ದಾಪುರ, ಯಾಕೂಬ ಕಾರಡಗಿ, ಸಾದಿಕ ಸಮಲೆವಾಲೆ ಸೇರಿದಂತೆ ಹಿಂದೂ-ಮುಸ್ಲಿಂ ಬಾಂಧವರು ಇದ್ದರು.


Spread the love

LEAVE A REPLY

Please enter your comment!
Please enter your name here