ಲಿವರ್ ಕ್ಯಾನ್ಸರ್​ಗೆ ಬಲಿಯಾದ ಜನಪ್ರಿಯ ಹಾಸ್ಯ ನಟ!

0
Spread the love

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜನಪ್ರಿಯ ಹಾಸ್ಯ ನಟ ಅತುಲ್​ ಪರ್ಚುರೆ ವಿಧಿವಶರಾಗಿದ್ದಾರೆ. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಅತುಲ್​ ಪರ್ಚುರೆ ಅವರು ಗುರುತಿಸಿಕೊಂಡಿದ್ದರು.

Advertisement

ಅತುಲ್​ ಪರ್ಚುರೆ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕೆಲವು ವರ್ಷಗಳಿಂದ ಅವರು ಲಿವರ್ ಕ್ಯಾನ್ಸರ್​ಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ತಾಯಿ, ಪತ್ನಿ ಮತ್ತು ಮಗಳನ್ನು ಅತುಲ್​ ಅವರು ಅಗಲಿದ್ದಾರೆ.

ಕಾಮಿಡಿ ಪಾತ್ರಗಳ ಮೂಲಕ ಅತುಲ್​ ಅವರು ಖ್ಯಾತಿ ಗಳಿಸಿದ್ದರು. ಅವರ ಜೊತೆ ಕೆಲಸ ಮಾಡಿದ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಅತುಲ್​ ಪರ್ಚುರೆ ಅವರು ತಮ್ಮದೇ ಛಾಪು ಮೂಡಿಸಿದ್ದರು. ಅವರ ಪ್ರತಿಭೆಯಿಂದ ಬಾಲಿವುಡ್​ ಸಿನಿಮಾಗಳಲ್ಲೂ ಅವಕಾಶ ಪಡೆದರು. ‘ಕಲ್​ಯುಗ್​​’, ‘ಗೋಲ್​ಮಾಲ್​’, ‘ಪಾರ್ಟ್ನರ್​’, ‘ಬಿಲ್ಲು ಬಾರ್ಬರ್​’, ‘ಆಲ್​ ದಿ ಬೆಸ್ಟ್​’, ‘ಆವಾರಪನ್​’, ‘ಬುಡ್ಡ ಹೋಗ ತೇರಾ ಬಾಪ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅತುಲ್​ ಪರ್ಚುರೆ ಅವರು ಅಭಿನಯಿಸಿದ್ದರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here