ಬೆಂಗಳೂರು: ಮೂರನೇ ದಿನವೂ ಇಂಡಿಗೋ ವಿಮಾನ ರದ್ದಿನ ಸಮಸ್ಯೆ ಮುಂದುವರಿದ್ದು, ಏರ್ಪೋರ್ಟ್ನಲ್ಲಿ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಇಂಡಿಗೋ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದವರು ಫ್ಲೈಟ್ ಸಿಗದೆ ಒದ್ದಾಡ್ತಿದ್ದಾರೆ. ಇಂಡಿಗೋ ಕೌಂಟರ್ ಗಳ ಮುಂದೆ ಟಿಕೆಟ್ ಕ್ಯಾನ್ಸಲ್ ಗೆ ಉದ್ದದ್ದ ಕ್ಯೂ ಇದೆ.
ಗಂಟೆ ಗಟ್ಟಲೆ ಕ್ಯೂ ನಲ್ಲಿ ನಿಂತರು ಸಮರ್ಪಕ ಮಾಹಿತಿ ಕೊಡ್ತಿಲ್ಲ ಅಂತ ಜನರು ಆಕ್ರೋಶ ಹೊರಹಾಕಿದ್ರು. ಇದರ ನಡುವೆ ಕುಟುಂಬವೊಂದು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆಯ ಪೂಜೆಗೆ ತಯಾರಿ ಮಾಡಿಕೊಂಡು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆದ್ರೆ, ಕೊನೆ ಕ್ಷಣದಲ್ಲಿ ವಿಮಾನ ರದ್ದಾಗಿರುವುದು ತಿಳಿದು ಆಘಾತಕ್ಕೊಳಗಾಗಿದ್ದಾರೆ.
ಅತ್ತ ಹರಿದ್ವಾರದಲ್ಲಿ ಪೂಜೆಗೆ ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳಲಾಗಿದ್ರೆ, ಇತ್ತ ಬೆಂಗಳೂರಿನಿಂದ ವಿಮಾನ ಕ್ಯಾನ್ಸಲ್ ಆಗಿದ್ದರಿಂದ ಕುಟುಂಬ ಅಸ್ಥಿಯನ್ನು ಕೈನಲ್ಲೇ ಹಿಡಿದುಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಕುಳಿತುಕೊಂಡಿದೆ.



