HomeGadag Newsಮನೆ ಸಕ್ರಮಗೊಳಿಸುವಂತೆ ಮನವಿ

ಮನೆ ಸಕ್ರಮಗೊಳಿಸುವಂತೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ತಾಲೂಕಿನ ಯಲಿಶಿರೂರ ಗ್ರಾ.ಪಂಗೆ ಒಳಪಡುವ ಶಿರುಂಜ ಗ್ರಾಮದ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವಂತೆ ಗದಗ ತಹಸೀಲ್ದಾರರಿಗೆ ಗ್ರಾಮದ ಅಕ್ರಮ-ಸಕ್ರಮ ನಿವಾಸಿಗಳು ಮನವಿ ಸಲ್ಲಿಸಿದರು.

ಯಲಿಶಿರೂರ ಗ್ರಾ.ಪಂಗೆ ಒಳಪಡುವ ಶಿರುಂಜ ಗ್ರಾಮದ 40 ಬಡ ಕುಟುಂಬಗಳಿಗೆ ಮನೆ ಇಲ್ಲದ ಕಾರಣ ಸರ್ಕಾರಿ ಜಾಗೆಯಲ್ಲಿ ಸುಮಾರು ದಿನಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಈ ಜಾಗೆಯನ್ನು ಅಕ್ರಮ-ಸಕ್ರಮ ಯೋಜನೆಯಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಸುಮಾರು 5 ವರ್ಷ ಕಳೆದರೂ ನೋಂದಣಿ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಪತ್ರ ಸಲ್ಲಿಸಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಫಕ್ಕೀರೇಶಪ್ಪ ಶಿಂಧೆ, ಲಕ್ಷ್ಮಿ ಮಂ.ಹುಯಿಲಗೋಳ, ಲಕ್ಷಪ್ಪ ಸೊನ್ನದ, ಮುತ್ತಪ್ಪ ಹಿತ್ತಲಮನಿ, ನಿಂಗರಡ್ಡಿ ಹೆಸರಡ್ಡಿ, ಬಸವರಾಜ ಪೂಜಾರ, ಉಡಚಪ್ಪ ಪೂಜಾರ, ಅರ್ಜುನ ಲೆಂಕೆನ್ನವರ, ಸುಭಾಸ ಮಳ್ಳಣ್ಣವರ, ಬಸವರಾಜ ಹುಲಿಕಟ್ಟಿ, ಅಲ್ಲಿಸಾಬ ನದಾಫ, ಚನ್ನವೀರಪ್ಪ ಹಡಪದ, ರಂಗಪ್ಪ ಲೆಂಕೆಣ್ಣವರ, ಮಾರುತಿ ಪೂಜಾರ, ಇಬ್ರಾಹಿಂಸಾಬ ನದಾಫ್, ಹನಮಂತ ಲೆಂಕೆಣ್ಣವರ, ಅಶೋಕ ಶಿಂಧೆ, ಶರಣಪ್ಪ ಲೆಂಕೆಣ್ಣವರ, ಮುಕ್ತುಂಸಾಬ ನದಾಫ್ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!