HomeGadag Newsದಕ್ಷ ನೌಕರರ ಅಗತ್ಯವಿದೆ : ಕರೀಮಸಾಬ ಸುಣಗಾರ

ದಕ್ಷ ನೌಕರರ ಅಗತ್ಯವಿದೆ : ಕರೀಮಸಾಬ ಸುಣಗಾರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಗದಗ ಉಪ ವಿಭಾಗದ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ಥಾನದಿಂದ ಶನಿವಾರ ನಿವೃತ್ತಿ ಹೊಂದಿದ ಶ್ರೀಕಾಂತ ಬಡಿಗೇರ ಅವರನ್ನು ಸಾಮಾಜಿಕ ಕಾರ್ಯಕರ್ತರಾದ ಕರೀಮಸಾಬ ಸುಣಗಾರ ನೇತೃತ್ವದ ನಿಯೋಗ ಸನ್ಮಾನಿಸಿ, ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಕರೀಮಸಾಬ ಸುಣಗಾರ, ದಿನಗೂಲಿಯಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಪೂರ್ಣಾವಧಿ ನೌಕರನಾಗಿ ಸುದೀರ್ಘ 37 ವರುಷಗಳ ಕಾಲ ಸೇವೆಯನ್ನು ಸಲ್ಲಿಸಿ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿಯಿಂದ ನಿವೃತ್ತಿ ಆಗಿರುವ ಶ್ರೀಕಾಂತ ಬಡಿಗೇರ ದಕ್ಷ ನೌಕರಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ. ಇಂತಹ ಸೇವಾ ಭಾವನೆಯ ದಕ್ಷತೆ ಮೆರೆಯುವ ನೌಕರರ ಅವಶ್ಯಕತೆ ಇಂದಿನ ಆಡಳಿತ ವ್ಯವಸ್ಥೆಗೆ ಇದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಂಕರ ಮುಳಗುಂದ, ಅಬ್ದುಲ್ ಮುನಾಫ, ಪತ್ರಕರ್ತರಾದ ಸುನೀಲಸಿಂಗ್ ಲದ್ದಿಗೇರಿ, ಸುರೇಂದ್ರಸಿಂಗ್ ಕಾಟೇವಾಲ, ನವೀನ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img