ಚಿತ್ರದುರ್ಗ:- ಬೈಕ್- ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಸಮೀಪದಲ್ಲಿ ಜರುಗಿದೆ.
ಘಟನೆಯಿಂದ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ದುರ್ಮರಣ ಹೊಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವವರಾದ ಪ್ರವೀಣ್ (29), ಯೋಗೀಶ್ (27) ಮೃತ ದುರ್ದೈವಿಗಳು ಎನ್ನಲಾಗಿದೆ.
ಹೊಸದುರ್ಗ ಕಡೆಯಿಂದ ಕಡೂರು ಕಡೆ ಬರುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಈ ಕಾರು ಕುಂದಾಪುರ ಮೂಲದ ಚಿತ್ರೇಶ್ ಕುಮಾರ್ ಶೆಟ್ಟಿಗೆ ಸೇರಿದ್ದು, ಘಟನೆಯಲ್ಲಿ ಅಜ್ಜಯ್ಯ ಎಂಬ ಬೈಕ್ ಸವಾರನಿಗೆ ಗಾಯವಾಗಿದೆ.
ಗಾಯಾಳುಗೆ ಹೊಸದುರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಹೊಸದುರ್ಗ ಸಿಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.



