ಹಾವೇರಿ:- ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದಲ್ಲಿ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಮಗನ ಮೃತದೇಹ ಕಂಡ ತಾಯಿ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 18 ವರ್ಷದ ಧನರಾಜ್ ಸುರೇಶ ಹಾದಿಮನಿ ಹಾಗೂ 43 ವರ್ಷದ ಭಾಗ್ಯಮ್ಮ ಹಾದಿಮನಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಬೈಕ್ ಕೊಡಿಸುವ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ಗಲಾಟೆ ತಾರಕಕ್ಕೇರಿದಾಗ ಮಗನನ್ನು ಹೆದರಿಸಲೆಂದು ನಾನು ಸಾಯುತ್ತೇನೆ ಎಂದ ಭಾಗ್ಯಮ್ಮ ಪಕ್ಕದ ಮನೆಗೆ ಹೋಗಿದ್ದರು. ಈ ಸಮಯದಲ್ಲಿ ಪುತ್ರ ಧನರಾಜ್ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಗೆ ಬಂದು ಮೃತ ಮಗನನ್ನು ಕಂಡು ದುಃಖಿತರಾದ ಭಾಗ್ಯಮ್ಮ ನನ್ನಿಂದ ಮಗ ಸತ್ತನಲ್ಲ ಎಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.