ತಿರುವಣ್ಣಮಲೈನಲ್ಲಿ ಕಾರ್ತಿಕ ಮಾಸದ ದೀಪಗಳ ಅದ್ಭುತ ಹಬ್ಬ

0
Spread the love

ತಮಿಳುನಾಡಿನ ತಿರುವಣ್ಣಮಲೈನಲ್ಲಿ ಕಾರ್ತಿಕ ಮಾಸ ಕೃತ್ತಿಕ ದಿನದಂದು, ಅಂದರೆ 13 ಡಿಸೆಂಬರ್ 2024ರಂದು ಅರುಣಾಚಲ ಪರ್ವತದ ಮೇಲೆ ಸಾಯಂಕಾಲ 6 ಗಂಟೆಗೆ ಕಾರ್ತಿಕ ದೀಪ ಪ್ರಜ್ವಲಿಸುತ್ತದೆ.  ಪ್ರತಿವರ್ಷ ಕಾರ್ತಿಗೈ ಮಾಸದ ಕೃತ್ತಿಕ ದಿನ ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಮತ್ತು ಅಲ್ಲಿನ ಅರುಣಾಚಲ ಪರ್ವತದ ಮೇಲೆ ಸುಂದರವಾದ ಒಂದು ದೊಡ್ಡ ದೀಪವನ್ನು ಪ್ರಜ್ವಲಿಸಲಾಗುತ್ತದೆ.  ನಂತರ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಗುತ್ತದೆ.

Advertisement

ಇಲ್ಲಿ ಹಚ್ಚಲಾಗುವ ದೊಡ್ಡ ದೀಪದಲ್ಲಿ ಬಹುತೇಕ ಮೂರೂವರೆ ಸಾವಿರ ಕಿಲೋಗಳಿಗಿಂತ ಹೆಚ್ಚು ತುಪ್ಪ ಮತ್ತು 1 ಸಾವಿರ ಮೀಟರ್‌ನಷ್ಟು ಬಟ್ಟೆಯನ್ನು ಬತ್ತಿಗಾಗಿ ಉಪಯೋಗಿಸಲಾಗುತ್ತದೆ. ಅದಕ್ಕೂ ಮೊದಲು ಪ್ರಾತಃಕಾಲ 4 ಗಂಟೆಗೆ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪವನ್ನು ಪ್ರಜ್ವಲಿಸಲಾಗುತ್ತದೆ ಮತ್ತು ನಂತರ ಅದೇ ದೀಪವನ್ನು ಅರ್ಚಕರು ಮತ್ತು ಗ್ರಾಮಸ್ಥರು ಒಟ್ಟಿಗೆ ಪರ್ವತದ ಮೇಲೆ ತೆಗೆದುಕೊಂಡು ಹೋಗುತ್ತಾರೆ. ಸಾಯಂಕಾಲ ಸರಿಯಾಗಿ 6 ಗಂಟೆಗೆ ‘ಕಾರ್ತಿಕ ದೀಪಮ್’ ಪ್ರಜ್ವಲಿಸಲಾಗುತ್ತದೆ. ಈ ದೀಪೋತ್ಸವದ ನೇರಪ್ರಸಾರವನ್ನು ದೂರದರ್ಶನ ವಾಹಿನಿ ಮೂಲಕ ಪ್ರಸಾರ ಮಾಡಲಾಗುತ್ತದೆ.

ತಿರುವಣ್ಣಾಮಲೈ ದೇವಸ್ಥಾನ  ಕಾರ್ತಿಕ ದೀಪಮ್ ಉತ್ಸವವನ್ನು ನೋಡಬಹುದು ಮತ್ತು ಅಲ್ಲಿನ ಪ್ರತಿಯೊಬ್ಬರೂ ಕಾರ್ತಿಕ ದೀಪಮ್ ಪ್ರಜ್ವಲಿಸಿ ಒಂದು ರೀತಿಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದು ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ತಿರುವಣ್ಣಾಮಲೈ ಮತ್ತು ಅರುಣಾಚಲ ಹೆಸರುಗಳು ಪವಿತ್ರ ಅಗ್ನಿ ಬೆಟ್ಟವನ್ನು ಸೂಚಿಸುತ್ತವೆ. ಕಾಲಾನಂತರ ರಾಜರು ಮತ್ತು ಪ್ರಸಿದ್ಧ ಸಿಬ್ಬಂದಿಗಳು ಶಿವನ ಸ್ಮರಣಾರ್ಥ ಬೆಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಿದರು. ಈ ನಿರ್ದಿಷ್ಟ ಸ್ಥಳದಲ್ಲಿ ಈ ಹಬ್ಬವನ್ನು ಅದ್ಭುತವಾಗಿ ಆಚರಿಸಲಾಗುತ್ತದೆ.

ತಿರುವಣ್ಣಾಮಲೈ ದೇವಸ್ಥಾನಕ್ಕೆ ಬೆಂಗಳೂರಿನಿAದ ಹೊಸೂರು, ಕೃಷ್ಣಗಿರಿ-ಚೆಂಗಂ ಮೂಲಕ ಸುಲಭವಾಗಿ ಬಸ್ಸುಗಳಲ್ಲಿ ತೆರಳಬಹುದು. ಬೆಂಗಳೂರಿನಿAದ ೨೨೦ ಕಿ.ಮೀ ಹಾಗೂ ಚೆನ್ನೈ ನಗರದಿಂದ 185 ಕಿ.ಮೀ ದೂರದಲ್ಲಿ ನೆಲೆಸಿರುವ ತಿರುವಣ್ಣಾಮಲೈ ಅಣ್ಣಾಮಲೈ ಬೆಟ್ಟಗಳ ಬುಡದಲ್ಲಿ ರೂಪಗೊಂಡ ಪಟ್ಟಣವಾಗಿದೆ. ಈ ಎರಡೂ ಪ್ರಮುಖ ನಗರಗಳಿಂದ ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ತಿರುವಣ್ಣಾಮಲೈಯಲ್ಲಿ ಹುಣ್ಣಿಮೆಯ ದಿನ ಗಿರಿವಲಂ ನಡೆಯುತ್ತದೆ. ಗಿರಿವಲಂ ಅಂದರೆ ಈ ಪವಿತ್ರ ಬೆಟ್ಟ ಗುಡ್ಡದ ಸುತ್ತ ಪ್ರದಕ್ಷಿಣೆ ಹಾಕುವುದು. ಇದಕ್ಕಾಗಿ ರಸ್ತೆಯ ಮಾರ್ಗವಿದ್ದು, ಭಕ್ತಾದಿಗಳು ಈ ಬೆಟ್ಟವನ್ನು ಸುಮಾರು 14 ಕಿ.ಮೀ ಕಾಲ್ನಡಿಗೆಯಲ್ಲಿ ಚಲಿಸಿ ಪ್ರದಕ್ಷಿಣೆ ಹಾಕಬಹುದು. ಕಲಿಯುಗದಲ್ಲಿ ಈ ಒಂದು ಪ್ರದಕ್ಷಿಣೆಯು ಸಾವಿರ ಕುದುರೆ ಗಳತ್ಯಾಗಕ್ಕೆ ಸಮ ಎಂದು ಹೇಳಲಾಗಿದೆ ಹಾಗೂ ನಿರಂತರ ಭೇಟಿ ಹಾಗೂ ಪ್ರದಕ್ಷಿಣೆಯಿಂದ ಜೀವನ್ಮರಣಗಳ ಕಾಲ ಚಕ್ರದಿಂದ ಮುಕ್ತಿ ಪಡೆಯಬಹುದು ಎಂದೂ ಸಹ ಹೇಳಲಾಗಿದೆ.

ಇಲ್ಲಿರುವ ಎಂಟು ಶಿವಲಿಂಗಗಳು ಹಾಗೂ ಅವುಗಳನ್ನು ಪೂಜಿಸುವುದರಿಂದ ದೊರಕುವ ಫಲಗಳು.

೧-ಇಂದ್ರ ಲಿಂಗಂ. ಇಂದ್ರ ಆಕಾಶ ದೇವತೆಗಳ ದೊರೆಯಾಗಿದ್ದು, ಸೂರ್ಯ ಹಾಗೂ ಶುಕ್ರ ಗ್ರಹಗಳ ಪ್ರತೀಕವಾಗಿದೆ. ಆಯುಷ್ಯ ವೃದ್ಧಿ ಹಾಗೂ ಪ್ರಸಿದ್ಧಿಯ ಫಲಗಳನ್ನು ಪಡೆಯಬಹುದು.

೨-ಅಗ್ನಿ ಲಿಂಗಂ-ಅಗ್ನಿ ದೇವ ಭಯ ಹಾಗೂ ರೋಗಗಳಿಂದ ಮುಕ್ತಿ ನೀಡುತ್ತಾನೆ.

೩-ಯಮ ಲಿಂಗಂ- ಯಮ ದೇವ ಸನ್ಮಂಗಳ, ಸುದೀರ್ಘ ಜೀವನವನ್ನು ಅನುಗ್ರಹಿಸುತ್ತಾನೆ.

೪-ನಿರುತಿ ಲಿಂಗಂ- ನಿರುತಿಯು ದೈತ್ಯಗಳ ದೊರೆ(ರಾಹು) ಆರೋಗ್ಯ ಭಾಗ್ಯ, ಸಂತಾನ ಪ್ರಾಪ್ತಿ ಕರುಣಿಸುತ್ತಾನೆ.

೫-ವರುಣ ಲಿಂಗಂ- ವರುಣ ದೇವರು(ಶನಿ) ಜಲ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ನೀಡುತ್ತಾನೆ.

೬- ವಾಯು ಲಿಂಗಂ-ವಾಯು ದೇವರು(ಕೇತು) ಶ್ವಾಸಕೋಶ, ಹೃದಯ ಸಂಬಂಧಿ ತೊಂದರೆಗಳಿAದ ಮುಕ್ತಿ ನೀಡುತ್ತಾನೆ.

೭-ಕುಬೇರ ಲಿಂಗಂ-ಕುಬೇರನು(ಗುರು)ಧನ ಪ್ರಾಪ್ತಿ ಹಾಗೂ ಪ್ರತಿಷ್ಠೆಯನ್ನು ಅನುಗ್ರಹಿಸುತ್ತಾನೆ.

೮- ಈಶಾನ್ಯ ಲಿಂಗಂಈಶಾನ್ಯ(ಬುಧ) ನೆಮ್ಮದಿ ಹಾಗೂ ಮನಸ್ಸಿನ ಶಾಂತಿಗೆ ಕಾರಣನಾಗುತ್ತಾನೆ.

              – ವಿ.ಎಂ.ಎಸ್.ಗೋಪಿ.

ಸಾಹಿತಿಗಳು, ಬೆಂಗಳೂರು.


Spread the love

LEAVE A REPLY

Please enter your comment!
Please enter your name here