ಮಂಡ್ಯ:- ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದ ಕೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ನೀರಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
28 ವರ್ಷದ ಪ್ರದೀಪ್ ಮೃತ ಯುವಕ. ಈತ ಯರಹಳ್ಳಿ ಗ್ರಾಮದ ಯುವಕ ಎನ್ನಲಾಗಿದೆ. ರಾತ್ರಿ ಬೇಲೂರು ಕೆರೆಯಲ್ಲಿ ಯುವಕರು ಗಣೇಶ ವಿಸರ್ಜನೆ ಮಾಡ್ತಿದ್ದರು. ಈ ವೇಳೆ ಯುವಕರ ಜೊತೆ ನೀರಿಗಿಳಿದಿದ್ದ ಪ್ರದೀಪ್, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರದೀಪ್ ಮದ್ಯಪಾನ ಮಾಡಿ ನೀರಿಗಿಳಿದಿದ್ದ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ, ಪ್ರದೀಪ್ ಮೃತ ದೇಹ ಹೊರ ತೆಗೆದಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.