ಬೆಂಗಳೂರು: ಯುವತಿಯನ್ನ ಸ್ನೇಹಿತೆ ರೂಂಗೆ ಕರೆದೊಯ್ದು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಾದನಾಕನಹಳ್ಳಿ ಪೊಲೀಸರು ತಿರುಪತಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಪ್ರೇಮ್‌ವರ್ಧನ್ ಬಂಧಿತ ಆರೋಪಿಯಾಗಿದ್ದು, ದೇವಿಶ್ರೀ ಹಾಗೂ ಪ್ರೇಮ್‌ವರ್ಧನ್ ಇಬ್ಬರೂ ಪ್ರೇಮಿಗಳು.
ಇವರಿಬ್ಬರೂ ಆಂಧ್ರ ಮೂಲದವರಾಗಿದ್ದು, ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ಓದಿದ್ದರು. ಬಳಿಕ ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಪ್ರೇಮ್‌ವರ್ಧನ್ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರಿಗೆ ಬಂದಾಗಿನಿಂದ ದೇವಿಶ್ರೀಗೆ ಬೇರೊಂದು ಹುಡುಗನ ಜೊತೆ ಸ್ನೇಹ ಬೆಳೆದಿತ್ತು.
ದೇವಿಶ್ರೀ ಫೋನ್‌ನಲ್ಲಿ ಬೇರೊಂದು ಹುಡುಗನ ಜೊತೆ ಮಾತನಾಡುತ್ತಿದ್ದಳು. ಇದರಿಂದ ಪ್ರೇಮ್‌ವರ್ಧನ್ ಕೋಪಗೊಂಡಿದ್ದ. ಭಾನುವಾರ ಪ್ರೇಮ್‌ವರ್ಧನ್ ದೇವಿಶ್ರೀಯನ್ನ ಭೇಟಿ ಮಾಡಲು ಬಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಪ್ರೇಮ್‌ವರ್ಧನ್‌ನನ್ನು ಅರೆಸ್ಟ್ ಮಾಡಿದ್ದಾರೆ.



