ಬಿಜೆಪಿ ವೀಕ್ ಇರೋ ರಾಜ್ಯಗಳಲ್ಲಿ ರಾಜಭವನ ದುರ್ಬಳಕೆ: ಪ್ರಿಯಾಂಕ ಖರ್ಗೆ!

0
Spread the love

ಬೆಂಗಳೂರು:- ಬಿಜೆಪಿ ವೀಕ್ ಇರೋ ರಾಜ್ಯಗಳಲ್ಲಿ ರಾಜಭವನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ.

Advertisement

ಬಿಜೆಪಿಯವರಿಗೆ ನೈತಿಕತೆ ಇದ್ದರೆ, ಪೋಕ್ಸೋ ಕೇಸ್‌ನಲ್ಲಿರುವ ಪೂಜ್ಯ ಜನನ ತಂದೆಯವರನ್ನು ಶರಣಾಗತಿ ಮಾಡಲಿ. ಕಾಂಗ್ರೆಸ್‌ನವರ ನೈತಿಕತೆ ಪ್ರಶ್ನಿಸುವ ಬಿಜೆಪಿ ನಾಯಕರು ಅಪ್ಪಾಜಿಯವರನ್ನು ಶರಣಾಗತಿ ಮಾಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಂದರು.

ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ಕಾನೂನು ಬಾಹಿರವಾಗಿ ಭೂಮಿ ನೀಡಿಲ್ಲ. ನಮಗಾಗಿ ಯಾವುದೇ ನಿಯಮ ಬದಲಾವಣೆ ಮಾಡಿಲ್ಲ. ಕಾನೂನು ಯಾರಾದರೂ ಬದಲಾವಣೆ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ನಮ್ಮ ಟ್ರಸ್ಟ್ ಮೇಲೆ ಅವರಿಗೆ ಆಕ್ಷೇಪ ಇಲ್ಲ. ಅವರಿಗೆ ಆಕ್ಷೇಪ ಇರೋದು ಪ್ರಿಯಾಂಕ್ ಖರ್ಗೆ ಮೇಲೆ ಮಾತ್ರ.

ಟ್ರಸ್ಟ್ ಚಟುವಟಿಕೆಗಳನ್ನು ಅವರು ಒಪ್ಪುತ್ತಾರೆ. ಆದರೆ ಈಗ ಭೂಮಿ ಪಡೆದ ಪ್ರಕ್ರಿಯೆ ಬಗ್ಗೆ ಈಗ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾವು ಪಡೆದ ಭೂಮಿಗೆ ಮಾತ್ರ ನಿಯಮಗಳು ಬದಲಾವಣೆ ಆಗಿದೆಯಾ…? ಅಥವಾ ಎಲ್ಲಾ ಪ್ಲಾಟ್‌ಗಳಿಗೆ ಬದಲಾವಣೆ ಮಾಡಲಾಗಿದೆಯಾ..? ಸಮರ್ಪಕವಾಗಿ ದಾಖಲೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಯಾವ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ವೀಕ್ ಇದೆಯೋ ಅಲ್ಲಿ ರಾಜಭವನ ದುರ್ಬಳಕೆ ಆಗ್ತಿದೆ. ಸರ್ಕಾರಿ ಯಂತ್ರದ ದುರ್ಬಳಕೆ ಆಗುತ್ತಿದೆ. ಪಾದಯಾತ್ರೆ ವಿಫಲ ಆಯ್ತು. ಅದಕ್ಕೆ ಇದೆಲ್ಲಾ ಈಗ ಹೊರಗೆ ಬರ್ತಾ ಇದೆ. ನಾನು ವೈಯಕ್ತಿಕವಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಟೀಕೆ ಮಾಡಿಲ್ಲ. ಬಿಜೆಪಿಯವರಿಗೆ ಇಂಗ್ಲಿಷ್ ಬರಲ್ಲ, ಕಾನೂನು ಅರ್ಥ ಆಗಿಲ್ಲ ಎಂದು ಹೇಳಿದ್ದೆ.

ವೈಯಕ್ತಿಕವಾಗಿ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿ ಬೆಳೆದವರು. ಕಾಂಗ್ರೆಸ್ ಬಹಳ ಅವಕಾಶ ಕೊಟ್ಟಿತ್ತು. ಈಗ ಅವರು ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ.

ನಾವು ಹೋಗಿ ಕ್ಲೈಮ್‌ ಮಾಡುತ್ತೇವೆ ಎಂದು ಹೇಳಿದ್ದರು. ನಿಯಮ ಮೀರಿ ಆಸ್ತಿ ಮಾಡಿದ್ದರೆ ಮೋದಿ, ಅಮಿತ್ ಶಾ ಬಿಡ್ತಾ ಇದ್ರಾ…? ಅವರು ದೆಹಲಿಗೆ ಹೋರಾಟ ಮಾಡಿಕೊಂಡು ಹೋಗಲಿ, ಪರವಾಗಿಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here