ಗದಗ:- ಸಾರಿಗೆ ಸಂಸ್ಥೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದ ಬಳಿ ಜರುಗಿದೆ.
ಕರಮುಡಿ ಗ್ರಾಮದ 24 ವರ್ಷದ ಜಗದೀಶ ಮೃತ ದುರ್ದೈವಿ. ಬೈಕ್ ಸವಾರ ಹೊಳೆಅಲೂರಿನಿಂದ ಕರಮುಡಿ ಗ್ರಾಮಕ್ಕೆ ತೆರಳು ದ್ದಾಗ ಈ ಅವಘಡ ಸಂಭವಿಸಿದೆ.
ರೋಣ ಡಿಪೋಗೆ ಈ ಬಸ್ ಸೇರಿದ್ದು, ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಘಟನೆ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



