ಕಲಘಟಗಿ:- ತಾಲೂಕಿನ ನೀರಸಾಗರ ಜಲಾಶಯದಲ್ಲಿ ಈಜಲು ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಹುಬ್ಬಳ್ಳಿ ಮೂಲದ ಜಾಫರ್ ಮೃತ ಯುವಕ. ಹುಬ್ಬಳ್ಳಿಯಿಂದ ತನ್ನ ಸ್ನೇಹಿತರೊಂದಿಗೆ ನೀರಸಾಗರ ಜಲಾಶಯಕ್ಕೆ ಈಜಲು ಹೋಗಿದ್ದ ಯುವಕ, ಈಜು ಬಾರದೇ ಮುಳುಗಿ ಸಾವನಪ್ಪಿದ್ದಾನೆ.
ಯುವಕನ ಮೃತ ದೇಹವನ್ನು ಹೊರ ತೆಗೆಯಲಾಗಿದ್ದು, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.