ದೊಡ್ಡಬಳ್ಳಾಪುರ: ಕುಡಿದು ಬಿಲ್ ಕಟ್ಟುವ ವಿಚಾರಕ್ಕೆ ಕೊಲೆ ಮಾಡಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಗೌತಮ್, ಮಹೇಶ್ ಮತ್ತು ಅನಿಲ್ ಬಂಧಿತ ಆರೋಪಿಗಳಾಗಿದ್ದು,
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಬಳಿ ರಘು ಅಲಿಯಾಸ್ ಬುಲೆಟ್ ರಘು ( 30 ) ಎಂಬುವವನನ್ನ ಕೊಲೆ ಮಾಡಿದ್ದರು. ಸೆಪ್ಟೆಂಬರ್ 25 ರಂದು ಬಾರ್ ನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದರು.
ಈ ವೇಳೆ ಹಳೆ ವಿಚಾರ ತೆಗೆದು ಹಲ್ಲೆ ಮಾಡಿ ಸಿಮೆಂಟ್ ಇಟ್ಟಿಗೆ ಹಾಕಿ ಕೊಲೆ ಮಾಡಲಾಗಿತ್ತು. ಕೊಲೆ ನಂತರ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಪೊಲೀಸರು ಜೈಲಿಗಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.