ಎಂಟೇ ಎಂಟು ತಿಂಗಳಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡ ನಟ ಅಜಿತ್ ಕುಮಾರ್

0
Spread the love

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಈ ಹಿಂದೆ ಅಗತ್ಯಕ್ಕಿಂತಲೂ ಅಧಿಕ ತೂಕ ಹೊಂದಿದ್ದ ಅಜಿತ್‌ ಕುಮಾರ್‌ ಇದೀಗ ಯಾರು ಊಹಿಸಿರದ ರೀತಿಯಲ್ಲಿ ಬದಲಾಗಿದ್ದಾರೆ. ಕೇವಲ ಎಂಟೇ ಎಂಟು ತಿಂಗಳಲ್ಲಿ ಬರೋಬ್ಬರಿ 42 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಶಾಕ್‌ ನೀಡಿದ್ದಾರೆ.

Advertisement

ಸಿನಿಮಾ ಹಾಗೂ ರೇಸ್‌ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅಜಿತ್‌ ಕುಮಾರ್‌ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಅವರ ದೇಹದ ತೂಕ ಹೆಚ್ಚುತ್ತಲೇ ಇತ್ತು. ಅಭಿಮಾನಿಗಳು ಕೂಡ ಈ ಬಗ್ಗೆ ಟೀಕೆ ಮಾಡಿದ್ದರು. ಅಜಿತ್ ಅವರು ಫಿಟ್ನೆಸ್ ಮತ್ತು ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಫ್ಯಾನ್ಸ್ ಸಲಹೆ ನೀಡಿದ್ದರು. ಇದೀಗ ಅಜಿತ್‌ ಯಾರು ಊಹಿಸಿರದ ರೀತಿಯಲ್ಲಿ ತಮ್ಮ ದೇಹವನ್ನು ಫಿಟ್‌ ಆಗಿಸಿಕೊಂಡಿದ್ದಾರೆ.

ತಮ್ಮ ಫಿಟ್ನೆಸ್ ಬಗ್ಗೆ  ಮಾತನಾಡಿರುವ ಅಜಿತ್, “ಒಂದು ಹಂತದಲ್ಲಿ, ನನ್ನ ತೂಕ ಗಣನೀಯವಾಗಿ ಹೆಚ್ಚಿತ್ತು. ಆದರೆ ನಾನು ರೇಸಿಂಗ್‌ಗೆ ಮರಳಲು ನಿರ್ಧರಿಸಿದಾಗ, ಫಿಟ್‌ನೆಸ್‌ನ ಮಹತ್ವವನ್ನು ನಾನು ಅರಿತುಕೊಂಡೆ. ಕಳೆದ 8 ತಿಂಗಳುಗಳಲ್ಲಿ, ಆಗಸ್ಟ್ 2024 ರಿಂದ ಇಲ್ಲಿಯವರೆಗೆ, ನಾನು 42 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡಿದ್ದೇನೆ” ಎಂದು ಹಂಚಿಕೊಂಡರು.

ಕಟ್ಟುನಿಟ್ಟಿನ ಆಹಾರ ಪದ್ಧತಿ, ಈಜು ಮತ್ತು ಸೈಕ್ಲಿಂಗ್ ಮೂಲಕ   ಸಾಧಿಸಿದ್ದೇನೆ ಎಂದು ಅವರು ವಿವರಿಸಿದರು. ಅಜಿತ್ ಸಸ್ಯಾಹಾರಿ ಜೀವನಶೈಲಿಯನ್ನು ಸಹ ಅಳವಡಿಸಿಕೊಂಡಿದ್ದಾರೆ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.

“ನಾನು ದೈಹಿಕವಾಗಿ ಸದೃಢವಾಗಿರಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ.  ಓಟಗಳು ಅತ್ಯಂತ ಸವಾಲಿನವು, ಮತ್ತು ಯಶಸ್ವಿಯಾಗಲು, ನಾನು ನನ್ನ ಸಂಪೂರ್ಣ ಹೃದಯ ಮತ್ತು ಆತ್ಮವನ್ನು ರೇಸಿಂಗ್‌ಗೆ ಅರ್ಪಿಸಬೇಕು” ಎಂದು ಅವರು ಹೇಳಿದರು. “ನಾನು ಈಗ ಮಾಡುತ್ತಿರುವುದು ಅದನ್ನೇ” ಎಂದು ಅಜಿತ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here