ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ವಿವಾಹ ಬಲು ಅದ್ಧೂರಿಯಾಗಿ ನಡೆದಿದೆ. ಮೈಸೂರು ಅರಮನೆ ಮುಂಭಾಗದ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಹಾಗೂ ಧನ್ಯತಾ ವಿವಾಹ ಕಾರ್ಯ ಜರುಗಿದ್ದು, ಮೀನಾ ಲಗ್ನದಲ್ಲಿ ಡಾಕ್ಟರ್ ಧನ್ಯತಾಗೆ ನಟ ಡಾಲಿ ಧನಂಜಯ್ ಮಾಂಗಲ್ಯಧಾರಣೆ ಮಾಡಿದ್ದಾರೆ.
Advertisement
ಕುಟುಂಬಸ್ಥರು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಅವರು ಧನ್ಯತಾ ಅವರ ಕೊರಳಿಗೆ ತಾಳಿ ಕಟ್ಟಿದ್ದಾರೆ. ಈ ಜೋಡಿ ವಧೂ ವರರ ದಿರಿಸಿನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಇದರಲ್ಲಿ ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು ಎಲ್ಲರೂ ಭಾಗಿಯಾಗಿದ್ದರು. ಇನ್ನೂ ಮೈಸೂರಿನಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿ ರಿಸೆಪ್ಷನ್ ಕೂಡ ನಡೆದಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ಯಾಂಡಲ್ವುಡ್ನ ಕಲಾವಿದರ ದಂಡೇ ರಿಸೆಪ್ಷನ್ಗೆ ಹರಿದು ಬಂದಿತ್ತು.