ಚಿಕ್ಕಮಗಳೂರು:- ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ರಂಭಾಪುರಿ ಶ್ರೀ ರೋಬೋಟಿಕ್ ಆನೆಯನ್ನು ಉದ್ಘಾಟಿಸಿದ್ದಾರೆ.
ನೋಡಲು ಸೇಮ್ ನಿಜವಾದ ಆನೆಯಂತೆ ಕಾಣುವ ರೋಬೋಟಿಕ್ ಎಲಿಫೆಂಟ್, ಹಲವು ವಿಶೇಷತೆಗಳನ್ನ ಹೊಂದಿದೆ. ಸಾದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಳುಗಾಡಿಸುತ್ತಿರವ ಆನೆ ಎಲ್ಲರ ಗಮನ ಸೆಳೆಯುತ್ತಿದೆ.
ನೋಡಿದ ಕೂಡಲೇ ನಿಜವಾದ ಆನೆಯಂತೆಯೇ ಭಾಸವಾಗುವ ಈ ಆನೆ ಪಂಚಪೀಠ ಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠದ ಹಸ್ತಾಂತರ ವಾಗಿದೆ. ರಂಭಾಪುರಿ ಮಠ ಈ ವಿಶೇಷ ಆನೆಯ ಆಗಮನಕ್ಕೆ ಸಾಕ್ಷಿ ಯಾಗಿದೆ.



