HomeGadag Newsಒಕ್ಕೂಟ ನೊಂದವರ ದ್ವನಿಯಾಗಿದೆ : ಸೋಮಣ್ಣ ಬೆಟಗೇರಿ

ಒಕ್ಕೂಟ ನೊಂದವರ ದ್ವನಿಯಾಗಿದೆ : ಸೋಮಣ್ಣ ಬೆಟಗೇರಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮಾಜದಲ್ಲಿ ಸಂಘಟನೆಗಳು ಬೇಕು. ಆದರೆ ನೆಪ ಮಾತ್ರಕ್ಕೆ ಸಂಘಟನೆಗಳನ್ನು ಹುಟ್ಟುಹಾಕುವ ಕಾರ್ಯ ಮಾಡುವದು ಬೇಡ. ಸಮಾಜಕ್ಕೆ ಒಳ್ಳೆಯದಾಗುವಂತಹ ಕಾರ್ಯಗಳನ್ನು ಮಾಡುವ ಉದಾತ್ತ ಮನೋಭಾವನೆಯ ಸಂಘಟನೆಗಳು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅಹಿಂದ ಒಕ್ಕೂಟ ನೊಂದವರ, ಶೋಷಿತರ ದ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಗದಗ ಜಿಲ್ಲಾ ಅಹಿಂದ ಒಕ್ಕೂಟದ ಗೌರವಾಧ್ಯಕ್ಷ ಸೋಮಣ್ಣ ಬೆಟಗೇರಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದಲ್ಲಿ ಶುಕ್ರವಾರ ಗದಗ ಜಿಲ್ಲಾ ಅಹಿಂದ ಒಕ್ಕೂಟದ ವತಿಯಿಂದ ವಿವಿಧ ತಾಲೂಕಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಂಘಟನೆಗಳು ಶೋಷಿತರ, ನೊಂದವರ ಕಣ್ಣೀರು ಒರಿಸುವ ಸಂಘಟನೆಗಳಾಗಬೇಕು. ತಮ್ಮ ಅನೂಕೂಲತೆಗಾಗಿ ಸಂಘಟನೆಗಳನ್ನು ಕಟ್ಟಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಹ ಸೌಲಭ್ಯಗಳು ದೊರೆಯುವಂತೆ ಮಾಡುವ ಕಾರ್ಯಗಳನ್ನು ಸಂಘಟನೆಗಳು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಹಿಂದ ಸಂಘಟನೆ ಬೆಳೆದು ಬರುತ್ತಿದ್ದು, ಇದು ಯಾವುದೇ ಪಕ್ಷ, ಜಾತಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ಅಹಿಂದ ಜಿಲ್ಲಾದ್ಯಕ್ಷ ಸೋಮನಗೌಡ್ರ ಮರೀಗೌಡ್ರ ಮಾತನಾಡಿ, 2020ರಲ್ಲಿಯೇ ಗದಗ ಜಿಲ್ಲೆಯಲ್ಲಿ ಅಹಿಂದ ಸಂಘಟನೆ ಪ್ರಾರಂಭವಾಗಿದ್ದು, ಬಡವರ ಅಭಿವೃದ್ಧಿಗೆ, ಬಡಮಕ್ಕಳ ವಿದ್ಯಾಬ್ಯಾಸಕ್ಕೆ, ಶೋಷಿತರಿಗೆ ಅನ್ಯಾಯವಾದಲ್ಲಿ ಅಹಿಂದ ಸಂಘಟನೆ ಅವರ ಪರವಾಗಿ ಕೆಲಸ ಮಾಡುತ್ತದೆ. ದೇವರಾಜ ಅರಸು ಅವರ ಸಿದ್ಧಾಂತದಂತೆ ಸಂಘಟನೆ ಕೆಲಸ ಮಾಡಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಮಲ್ಲಪ್ಪ ಹುಯಿಳಗೋಳ, ಉಪಾಧ್ಯಕ್ಷ ಯಲ್ಲಪ್ಪ ಸೂರಣಗಿ, ಮಂಜುನಾಥ ತಳವಾರ, ಕರಿಯಪ್ಪ ಬಳೂಟಗಿ, ಶಿವಣ್ಣ ಕಬ್ಬೇರ, ನೀಲಪ್ಪ ಪಡಗೇರಿ, ಅಬ್ದುಲರಜಾಕ ಗಾಡಗೊಳಿ, ರಾಮಣ್ಣ ರಿತ್ತಿ, ಮುದಕಣ್ಣ ಗದ್ದಿ, ಚಾಯಪ್ಪ ಬಸಾಪುರ, ಶೇಕಪ್ಪ ತಳವಾರ, ಅಹಿಂದ ಸಂಘಟನೆಯ ಜಿಲ್ಲಾ ಹಾಗೂ ತಾಲೂಕಾ ಕಾರ್ಯಕರ್ತರು ಇದ್ದರು.

ತಾಲೂಕಾ ಅಹಿಂದ ಘಟಕದ ನೂತನ ಅಧ್ಯಕ್ಷರಾಗಿ ಮಹಮ್ಮದಗೌಸ ಗಾಡಗೊಳಿ, ಗೌರವಾದ್ಯಕ್ಷರಾಗಿ ನಿಂಗಪ್ಪ ಬನ್ನಿ, ಉಪಾಧ್ಯಕ್ಷ ಹನುಮಂತ ಸರಗುಣಕಿ, ಕಾರ್ಯದರ್ಶಿಯಾಗಿ ಅಶೋಕ ತಳವಾರ, ಓಬಿಸಿ ಅಧ್ಯಕ್ಷರಾಗಿ ಭರಮಣ್ಣ ಶೇರಸೂರಿ, ಎಸ್‌ಸಿ ಘಟಕದ ಜಿಲ್ಲಾ ಗೌರವಾದ್ಯಕ್ಷರಾಗಿ ಭರತರಾಜ ಗುಡಗೇರಿ ಆಯ್ಕೆಯಾಗಿದ್ದು, ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here

E-Paper

E-paper

Must Read

spot_img