ವಿಜಯಸಾಕ್ಷಿ ಸುದ್ದಿ, ಗದಗL: ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳು ಶಿಕ್ಷಣ ಪ್ರಸಾರದಲ್ಲಿ ಪೈಪೋಟಿಯೊಂದಿಗೆ ಈ ಭಾಗದಲ್ಲಿ ಶಿಕ್ಷಣ ಹರಡುವಂತೆ ಮಾಡಿ, ದೇಶದ ಅಭಿವೃದ್ಧಿಗೆ ಜನರು ಪ್ರಜ್ಞಾವಂತರಾಗಿ ಕೈಜೋಡಿಸುವಂತಹ ಕೆಲಸ ಮಾಡಿವೆ. ಇಂತಹ ಶಿಕ್ಷಣ ಸಂಸ್ಥೆಗಳು ಇಂದು ಖಾಸಗೀಕರಣಗೊಂಡು ಆಂಗ್ಲ ಭಾಷಾ ಭರಾಟೆಯಲ್ಲಿ ಅನುದಾನಿತ ಶಾಲೆಗಳಿಗೆ ನಿವೃತ್ತ ಶಿಕ್ಷಕರ ಜಾಗದಲ್ಲಿ ಹುದ್ದೆ ತುಂಬಲು ಇಲಾಖೆ ಅನುಮತಿ ನೀಡದ್ದರಿಂದ ಇಂದು ಅನುದಾನಿತ ಕನ್ನಡ ಶಾಲೆಗಳು ಅಳಿವಿನ ಅಂಚಿನಲ್ಲಿವೆ ಎಂದು ವಿದ್ಯಾವರ್ಧಕ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ ನುಡಿದರು.
ಅವರು ಸಿ.ಎಸ್. ಪಾಟೀಲ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಹ ಶಿಕ್ಷಕ ಎಸ್.ಎಸ್. ಗುಜಮಾಗಡಿಯವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂತಹ ಶಾಲೆಗಳು ಮತ್ತೆ ಎದ್ದು ನಿಲ್ಲುವಂತಾಗಬೇಕಾದರೆ ನಿವೃತ್ತ ಶಿಕ್ಷಕರು, ಇಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ತಮ್ಮ ಶಾಲೆಯ ಹಳೆಯ ವೈಭೋಗ ನೋಡಲು ಇಚ್ಛಿಸಬೇಕು. ಅದಕ್ಕೆ ಕೈ ಜೋಡಿಸಬೇಕು ಎಂದರು.
ನಿವೃತ್ತಿ ಹೊಂದಿದ ಎಸ್.ಎಸ್. ಗುಜಮಾಗಡಿ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಡಾ. ಆರ್.ಎಲ್. ಹಂಸನೂರ, ಗದಗ ಜಿಲ್ಲೆ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಕೋಟಿ, ಆಂಜನೇಯ ಕಟಗಿ ಸಂದರ್ಭೋಚಿತವಾಗಿ ಮಾತನಾಡಿದರು. ನಿರ್ಮಲಾ ಲಮಾಣಿ ಪ್ರಾರ್ಥಿಸಿದರು. ಎಸ್.ಆರ್. ಗೌಡರ ಸ್ವಾಗತಿಸಿದರು. ಎಸ್.ಎಂ. ತಳವಾರ ವಂದಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಮ್.ಎಸ್. ,ಮಲ್ಲಾಪೂರ, ಗೀತಾಬಾಯಿ ಪಾಟೀಲ, ಎಸ್.ಜಿ. ಕೋಲ್ಮಿ, ಎಮ್.ಆರ್. ನಾಯಕ, ನಗರಸಭಾ ಅಭಿಯಂತರ ಎಚ್.ಎ. ಬಂಡಿವಡ್ಡರ, ವಿದ್ಯಾಧರ ದೊಡ್ಡಮನಿ, ಎಂ. ಇಸ್ಮಾಯಿಲ್, ಯಮನೂರಪ್ಪ ಗುಜಮಾಗಡಿ, ಎಸ್.ಎಸ್. ಗುಜಮಾಗಡಿ, ಶೋಭಾ ಗುಜಮಾಗಡಿ, ಎನ್.ಎಮ್. ಪಾಟೀಲ, ಎಂ.ಬಿ. ಹೋಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇಲಾಖೆಯ ಅಧಿಕಾರಿಗಳಾದ ಕವಿತಾ ಬೇಲೇರಿ, ತನು ಹೂಗಾರ, ಶಾಲೆಯ ನಿವೃತ್ತ ಶಿಕ್ಷಕರಾದ ಬಿ.ಜಿ. ಮೆಣಸಗಿ, ಎಸ್.ಎಸ್. ಗಂಜಿ, ಆರ್.ಕೆ. ಜಮಖಂಡಿ, ಜಿ.ಆಯ್. ಚನ್ನಪ್ಪನವರ, ಗುಜಮಾಗಡಿ ಶಿಕ್ಷಕರ ಅಭಿಮಾನಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟೆಪ್ಪನವರ ಮಾತನಾಡುತ್ತಾ, ವಿಶಾಲವಾದ ಮೈದಾನ ಸುಸಜ್ಜಿತ ಕಟ್ಟಡ ಹೊಂದಿದ ನಗರದ ಮಧ್ಯವರ್ತಿ ಸ್ಥಳದಲ್ಲಿರುವ ಇಂತಹ ಸಂಸ್ಥೆಗಳು ಉಳಿದು-ಬೆಳೆಯಲು ಅಧಿಕಾರಿಗಳಾದ ನಾವು ಕಾನೂನು ಚೌಕಟ್ಟಿನಲ್ಲಿ ಸಹಕರಿಸುತ್ತೇವೆ ಎಂದರು.