ವಿಶ್ವದ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಮಗಳು ಆರಾಧ್ಯ ಬಚ್ಚನ್ ಜೊತೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಐಶ್ವರ್ಯಾ, ಈ ಬಾರಿ ತಮ್ಮ ವಿಶಿಷ್ಟ ಫ್ಯಾಷನ್ ಆಯ್ಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣರಾದರು.
ನೀಲಿ ಬಣ್ಣದ ಅದ್ದೂರಿ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ಅವರ ಲುಕ್ ಕೆಲವರಿಗೆ ಮೆಚ್ಚುಗೆಯಾದರೆ, ಮತ್ತಷ್ಟು ಮಂದಿ ವಯಸ್ಸು ಮತ್ತು ಸ್ಟೈಲಿಂಗ್ ಕುರಿತು ಟೀಕೆ ಮಾಡಿದರು. ಈ ಟ್ರೋಲಿಂಗ್ ವಿರುದ್ಧ ಇದೀಗ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ನೇರವಾಗಿ ಕಿಡಿಕಾರಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಐಶ್ವರ್ಯಾ ಫೋಟೋ ಹಂಚಿಕೊಂಡ ಕಂಗನಾ, “ಯಾವ ಮಹಿಳೆಯೂ ಇತರರನ್ನು ಮೆಚ್ಚಿಸಲು ಮಾತ್ರ ಬದುಕುವುದಿಲ್ಲ. ಐಶ್ವರ್ಯಾ ತಮ್ಮ ಆತ್ಮವಿಶ್ವಾಸ ಮತ್ತು ವೈಯಕ್ತಿಕ ಶೈಲಿಯಿಂದ ರೆಡ್ ಕಾರ್ಪೆಟ್‌ನಲ್ಲಿ ನಿಲ್ಲುತ್ತಾರೆ” ಎಂದು ಬರೆದಿದ್ದಾರೆ.
ಟ್ರೋಲರ್‌ಗಳಿಗೆ ಮತ್ತಷ್ಟು ತಿರುಗೇಟು ನೀಡಿದ ಕಂಗನಾ, “ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡಲು ಅಭ್ಯಾಸವಿಲ್ಲದವರು ಈಗಲೇ ಅದಕ್ಕೆ ಹೊಂದಿಕೊಳ್ಳಬೇಕು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾನ್ 2026ರಲ್ಲಿ ಐಶ್ವರ್ಯಾ ಧರಿಸಿದ್ದ ವಿಶೇಷ ನೀಲಿ ಗೌನ್ ಅನ್ನು ಖ್ಯಾತ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ್ದು, ಅದನ್ನು ತಯಾರಿಸಲು ಸುಮಾರು 1500 ಗಂಟೆಗಳ ಶ್ರಮ ಬೇಕಾಗಿತ್ತು ಎಂದು ಹೇಳಲಾಗಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಐಶ್ವರ್ಯಾ ಲುಕ್ ಈಗ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದೆ.



