ಕ್ಲಾಂತ ಸಿನಿಮಾಗೆ ಸಾಥ್ ಕೊಟ್ಟ ಅಜಯ್ ರಾವ; ಜ.19ಕ್ಕೆ ದಟ್ಟ ಕಾನನದೊಳಗಿನ ಕಥನಾಕ ಬೆಳ್ಳಿತೆರೆಮೇಲೆ ಅನಾವರಣ

0
Spread the love

ಕ್ಲಾಂತ ಟ್ರೇಲರ್ ರಿಲೀಸ್..ವೈಭವ-ವಿಘ್ನೇಶ್ ಸಿನಿಮಾಗೆ ಅಜಯ್ ರಾವ್ ಸಾಥ್..ಜ.19ಕ್ಕೆ ಚಿತ್ರ ರಿಲೀಸ್

Advertisement

ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರೋ ಕ್ಲಾಂತ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ದಿನಾಂಕ ನಿಗದಿಯಾಗಿದೆ. ಜನವರಿ 19ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ. ಟೀಸರ್ ಹಾಗೂ ಹಾಡಿನ ಮೂಲಕ ಸದ್ದು ಮಾಡಿದ್ದ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ SRV ಥಿಯೇಟರ್‌ನಲ್ಲಿಂದು ನಟ ಅಜಯ್ ರಾವ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಅಜಯ್ ರಾವ್ ಮಾತನಾಡಿ, ಟ್ರೇಲರ್ ತುಂಬಾ ಆಕ್ಷನ್‌ನಿಂದ ಕೂಡಿದೆ. ಹೀರೋ, ಹೀರೋಯಿನ್ ಎಲ್ಲರೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಒಂದೊಳ್ಳೆ ಪ್ರಯತ್ನ. ಯಾವುದೇ ಆಗಲಿ ಎಲ್ಲದಕ್ಕೂ ಒಂದು ಪ್ರಾರಂಭ ಅಂತಾ ಇರುತ್ತದೆ. ಪ್ರಯತ್ನ ಇರುತ್ತದೆ. ಪ್ರಯತ್ನಕ್ಕೂ, ಪ್ರಾರಂಭಕ್ಕೂ ಒಳ್ಳೆ ಉದ್ದೇಶ ಇದ್ದಾಗ ಗೆಲುವು ಸಿಗಬೇಕು ಎಂದು ಆಶಿಸಬೇಕು. ನಿರ್ದೇಶಕರು ಹಾಗೂ ಅವರ ಸಹೋದರರು ನನ್ನ ಸ್ನೇಹಿತರು. ಹೊಸಬರಿಗೆ ಆದಷ್ಟು ಪ್ರೋತ್ಸಾಹಿ ಎಂದರು.

ನಿರ್ದೇಶಕ ವೈಭವ ಪ್ರಶಾಂತ್ ಮಾತನಾಡಿ, ಕ್ಲಾಂತ ಒಂದೂವರೆ ವರ್ಷದ ಜರ್ನಿ ನನ್ನದು. ಟ್ರೇಲರ್ ಈಗ ರಿಲೀಸ್ ಮಾಡಿದ್ದೇವೆ. ಶೂಟಿಂಗ್ ಗಾಗಿ 34 ರಿಂದ 40 ದಿನ ಕಾಡಲ್ಲೇ ಇದ್ದೇವು. ಸುಬ್ರಹ್ಮಣ್ಯ, ಕುದುರೆಮುಖ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಲಾಕ್‌ಡೌನ್ ಟೈಮ್ ನಲ್ಲಿಯೇ ಸ್ಕ್ರೀಪ್ಟ್ ಮಾಡಿದ್ದೇವೆ. ಕ್ಲಾಂತ ದಣಿವು, ಆಯಾಸ ಎಂದರ್ಥ. ಇದು ಸಂಸ್ಕೃತ ಶಬ್ಧ. ಈ ಮೊದಲು ವೀಕೆಂಡ್ ವಿತ್ ಲವರ್ ಎಂದು ಟೈಟಲ್ ಇಟ್ಟಿದ್ದೇವು. ಆ ಬಳಿಕ ಕ್ಲಾಂತ ಎಂದು ಬದಲಾಯಿಸಿದೆವು. ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಇದೇ 19ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು.

ನಟ ವಿಘ್ನೇಶ್‌ ಮಾತನಾಡಿ, ಕನ್ನಡದಲ್ಲಿ ನನ್ನದು ಮೊದಲ ಸಿನಿಮಾ. ಜ.19ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಶಾಂತ್ ಸರ್ ಮತ್ತು ನನ್ನದು ಇದು ಎರಡನೇ ಕಾಂಬಿನೇಷನ್. ‘ದಗಲ್ ಬಾಜಿಲು’ ಎಂಬ ತುಳು ಚಿತ್ರ ಮಾಡಿದ್ದೇವು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಕ್ಲಾಂತ ಸಿನಿಮಾ ಒಳ್ಳೆ ಸಕ್ಸಸ್ ಸಿಗುತ್ತದೆ ಎಂಬ ಹೋಪ್ ಇದೆ. ತಂದೆ ತಾಯಿ, ಅಪ್ಪ ಅಮ್ಮ ಪ್ರತಿಯೊಬ್ಬರು ಸಿನಿಮಾ ನೋಡ್ಬೇಕು.

‘ಅನುಗ್ರಹ ಪವರ್‌ ಮೀಡಿಯಾ’ ಬ್ಯಾನರಿನಲ್ಲಿ ಉದಯ್‌ ಅಮ್ಮಣ್ಣಾಯ ಕೆ. ನಿರ್ಮಿಸಿರುವ “ಕ್ಲಾಂತ’ ಸಿನಿಮಾಕ್ಕೆ ವೈಭವ ಪ್ರಶಾಂತ್‌ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ತುಳು ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ವಿಘ್ನೇಶ್‌, “ಕ್ಲಾಂತ’ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕಿ ಸಂಗೀತಾ ಭಟ್‌ ಅವರೊಂದಿಗೆ ಶೋಭರಾಜ್‌, ವೀಣಾ ಸುಂದರ್‌, ಸಂಗೀತಾ, ದೀಪಿಕಾ, ಪ್ರವೀಣ್‌ ಜೈನ್‌, ಸ್ವಪ್ನಾ ಶೆಟ್ಟಿಗಾರ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಸಕ್ರಿಯರಾಗಿರುವ ವೈಭವ್ ಪ್ರಶಾಂತ್  “ಕ್ಲಾಂತ’ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾಕ್ಕೆ ಮೋಹನ್‌ ಲೋಕನಾಥನ್‌ ಛಾಯಾಗ್ರಹಣ, ಪಿ. ಆರ್‌. ಸೌಂದರ ರಾಜ್‌ ಸಂಕಲನವಿದೆ. ಈ ಹಿಂದೆ ತೆರೆಕಂಡಿದ್ದ “ದಗಲ್ ಬಾಜಿಲು” ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಘ್ನೇಶ್ ಮತ್ತೊಮ್ಮೆ ಜೊತೆಯಾಗಿ ಕ್ಲಾಂತ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದ್ದಾರೆ.

ಸಿನಿಮಾದ ಮೂರು ಹಾಡುಗಳಿಗೆ ಎಸ್‌. ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌, ಐರಾ ಆಚಾರ್ಯ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಗುಂಡ್ಯಾ, ಕುಕ್ಕೆ ಸುಬ್ರಮಣ್ಯ, ಕಳಸ, ಮಂಗಳೂರು, ಬೆಂಗಳೂರು ಮೊದಲಾದ ಕಡೆಗಳಲ್ಲಿ “ಕ್ಲಾಂತ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಅಂಶ ಎಂದರೆ ಕೊರಗಜ್ಜ ದೇವರ ಪವಾಡವನ್ನು ಈ ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ.

ಈಗಾಗಲೇ ಇದರ ಹಾಡು ಕೂಡ ತುಳುನಾಡಿನಲ್ಲಿ ಬಿಡುಗಡೆ ಆಗಿ ಬಹಳ ಜನಪ್ರಿಯಗೊಂಡಿದೆ. ‘ದಗಲ್ ಬಾಜಿಲು’ ಎಂಬ ತುಳು ಚಿತ್ರ ಮಾಡಿ ಗೆದ್ದಿರುವ ವೈಭವ್ ಪ್ರಶಾಂತ್ ಹಾಗೂ ವಿಘ್ನೇಶ್ ಕ್ಲಾಂತ ಸಿನಿಮಾ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


Spread the love

LEAVE A REPLY

Please enter your comment!
Please enter your name here