ಬೆಂಗಳೂರು: ಆಳಂದ ಕ್ಷೇತ್ರದಲ್ಲಿ ವೋಟ್ ಚೋರಿ ಪ್ರಕರಣದ ಕುರಿತು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಯಾರೇ ತಪ್ಪು ಮಾಡಿದರೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಎಸ್‌ಐಟಿ ತನಿಖೆ ನಡೆಸಲಿ,” ಎಂದು ಅವರು ತಿಳಿಸಿದ್ದಾರೆ.
“ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇರುವುದರಿಂದ ಗೃಹ ಇಲಾಖೆ ಈ ಪ್ರಕರಣದ ಮೇಲೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಯಾರು ಚುನಾಯಿತರಾದರೂ, ನಕಲಿ ಆಧಾರ್ ಕಾರ್ಡ್ ಅಥವಾ 80 ರೂ.ಗೆ ವೋಟ್ ಡಿಲೀಟ್ ಮಾಡಿದ ಪ್ರಕರಣಗಳ ವಿಚಾರವಾಗಿ ತನಿಖೆ ನಡೆಯಬೇಕು. ತಪ್ಪು ಯಾರದ್ದಾದರೂ ಕಂಡುಬಂದರೆ ಕ್ರಮ ಆಗಲಿ.
“ಇದರಲ್ಲಿ ಚರ್ಚೆ ಮಾಡುವುದು ಬಿಟ್ಟು, ಸರ್ಕಾರ ರಾಜ್ಯದ ಅಭಿವೃದ್ಧಿಗೆ ಗಮನ ಕೊಡಬೇಕು. ಸಾರ್ವಜನಿಕ ಹಿತಚಿಂತನೆ ಆದ್ಯತೆ ಇರಬೇಕು ಎಂದರು.



