Homecultureಎಲ್ಲ ಗ್ರಂಥಗಳು ಮನುಷ್ಯನ ಏಳ್ಗೆಯನ್ನು ಬಯಸಿವೆ

ಎಲ್ಲ ಗ್ರಂಥಗಳು ಮನುಷ್ಯನ ಏಳ್ಗೆಯನ್ನು ಬಯಸಿವೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ : ಸಾಮೂಹಿಕ ವಿವಾಹಗಳನ್ನು ನೆರವೇರಿಸುವದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ಹೊಸಳ್ಳಿ ಶ್ರೀಮಠದ ಬೂದೇಶ್ವರ ಶ್ರೀಗಳು ಹೇಳಿದರು.

ಅವರು ಸೋಮವಾರ ಪಟ್ಟಣದ ಆಝಾದ ಯುವಕ ಸಂಘ ಹಾಗೂ ತಲಾಬಕಟ್ಟಾ ಮಕಾನ್ ಕಮಿಟಿ ಇವರ ಆಶ್ರಯದಲ್ಲಿ ಹಜರತ್ ಮಹ್ಮದ್ ಪೈಗಂಬರವರ ಜನ್ಮದಿನೋತ್ಸವ ಅಂಗವಾಗಿ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ತಪ್ಪಿಸುವುದಲ್ಲದೆ ಮನುಷ್ಯನನನ್ನು ಸಾಲದಿಂದ ದೂರಮಾಡುತ್ತವೆ ಎಂಬ ಸತ್ಯವನ್ನು ನಾವು ಅರಿಯಬೇಕು. ಮುಖ್ಯವಾಗಿ ಸಾಮೂಹಿಕ ವಿವಾಹದಂತಹ ಪುಣ್ಯ ಕಾರ್ಯದಲ್ಲಿ ಜಾತಿ-ಮತ-ಪಂಥಗಳಿಗೆ ಅವಕಾಶ ಇರುವುದಿಲ್ಲ. ಕಾರಣ, ಇಡೀ ಗ್ರಾಮ ಈ ಮಹತ್ತರ ಕಾರ್ಯದಲ್ಲಿ ಭಾಗಿಯಾಗಿರುತ್ತದೆ ಎಂದರು.

ಹಿಂದೂ, ಮುಸ್ಲಿಂ, ಕ್ರೈಸ್ತ ಇವರೆಲ್ಲರೂ ಕೂಡಿ ಬಾಳಿದಾಗ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ ಎಂಬ ಸಂದೇಶವನ್ನು ಮಾನವ ಕುಲ ಅರಿತುಕೊಳ್ಳಬೇಕು. ಯಾವುದೇ ಧರ್ಮದ ಗ್ರಂಥಗಳು ಕೆಟ್ಟದ್ದನ್ನು ಬೋಧಿಸಿಲ್ಲ. ಎಲ್ಲ ಗ್ರಂಥಗಳು ಮನುಷ್ಯನ ಏಳ್ಗೆಯನ್ನು ಬಯಸಿವೆ. ನಾಗರಿಕ ಸಮುದಾಯ ಈ ಸತ್ಯ ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಗುರುಪಾದ ದೇವರು, ಸುಲೇಮಾನ್ ಶಾವಲಿ ಅಜ್ಜನವರು ನೇತೃತ್ವ ವಹಿಸಿದ್ದರು. ಶಫೀಕ ಮೂಗನೂರ ಪ್ರಾಸ್ತವಿಕ ಮಾತನಾಡಿದರು. ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ಯೂಸುಪ್ ಇಟಗಿ, ಭಾವಾಸಾಬ ಬೆಟಗೇರಿ, ವಿ.ಬಿ. ಸೋಮನಕಟ್ಟಿಮಠ, ನಾಶೀರಖಾನ್ ಪಠಾಣ, ಭರಮಗೌಡ ಲಿಂಗನಗೌಡ್ರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!