ಗದಗ: ಕರ್ನಾಟಕದಾದ್ಯಂತ ಇಂದು 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿದ್ದು,
ಅದೇ ರೀತಿ ಗದಗ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದ್ರೆ ಕಾರ್ಯಕ್ರಮ ಮಧ್ಯೆ ಕೋತಿಯೊಂದು ಏಕಾಏಕಿ ಎಂಟ್ರಿ ನೀಡಿ, ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಹೌದು ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಗಣ್ಯರು ಹಾಜರಿದ್ದ ಸಂದರ್ಭದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಟ್ಯಾಬ್ಲೊ ವಾಹನದ ಬಳಿ ಕೆಲಸ ನಿರ್ವಹಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಎಚ್.ಸಿ. ಕೊಪ್ಪಳ್ ಎಂಬವರಿಗೆ ಆ ಕೋತಿ ಏಕಾಏಕಿ ಹಾರಿ ಕಿಕ್ ನೀಡಿದ್ದು, ಅವರು ನೆಲಕ್ಕೆ ಬಿದ್ದಿದ್ದಾರೆ.
ಕಿಕ್ ಕೊಟ್ಟ ಬಳಿಕ ಕೋತಿ ವೇಗವಾಗಿ ಓಡಿ, ಮಕ್ಕಳಿದ್ದ ಗ್ಯಾಲರಿಯತ್ತ ಏರಿ ಅಡಗಿ ಕೂತಿದೆ. ಕ್ಷಣ ಮಾತ್ರದಲ್ಲಿ ನಡೆದ ಈ ಘಟನೆಗೆ ಬೆಚ್ಚಿಬಿದ್ದಿದ್ದಾರೆ.ಮಂಗನಾಟದಿಂದ ಕಾರ್ಯಕ್ರಮ ಕೆಲಕಾಲ ಅಸ್ತವ್ಯಸ್ತಗೊಂಡಿದ್ದು, ಸಿಬ್ಬಂದಿ ಹಾಗೂ ಪೊಲೀಸರು ಕೋತಿಯನ್ನು ಹೊರಗೆ ಓಡಿಸಲು ಹರಸಾಹಸ ಪಟ್ಟಿದ್ದಾರೆ.


