ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಶುಕ್ರವಾರದಿಂದ ವಿಧಿವತ್ತಾಗಿ ಪ್ರಾರಂಭವಾಗಿದ್ದು, ಶುಕ್ರವಾರ ಸಂಜೆ ರಥಕ್ಕೆ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ಮಹಿಳೆಯರು ಉಡಿ ತುಂಬಿಸಿಕೊಂಡು ಇಷ್ಟಾರ್ಥ ಸಿದ್ಧಿಗೆ ಭಕ್ತಿಯಿಂದ ಪ್ರಾರ್ಥಿಸಿದರು. ಶ್ರೀ ಸೋಮೇಶ್ವರ ಜಾತ್ರಾ ಕಮಿಟಿ, ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಮತ್ತು ಅರ್ಚಕರ ಸೇವಾ ಸಮಿತಿಗಳ ಸಹಯೋಗದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ.
ಶುಕ್ರವಾರ ಸಂಜೆ ರಥದ ಮುಂದೆ ನಡೆದ ಕಾರ್ಯಕ್ರಮದಲ್ಲಿ ವೇ.ಮೂ. ಶಿವಲಿಂಗಯ್ಯ ಹಾಲೇವಾಡಿಮಠ ಉಡಿ ತುಂಬುವ ಕಾರ್ಯಕ್ರಮದ ಸಂಪ್ರದಾಯ ನೆರವೇರಿಸಿದರು. ಈ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಮಹತ್ವ ಮತ್ತು ಜಾತ್ರಾ ಮಹೋತ್ಸವ ನಡೆದು ಬಂದ ದಾರಿ ಇತ್ಯದಿಗಳನ್ನು ವಿವರಿಸಿದರು.
ಆಗಮಿಸಿದ್ದ ಸಾವಿರಾರು ಜನರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಕಮಿಟಿಯವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಅರ್ಚಕ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ, ಸುನೀಲ ಮಹಾಂತಶೆಟ್ಟರ, ಸಿದ್ದನಗೌಡ ಬಳ್ಳೊಳ್ಳಿ, ಸುರೇಶ ರಾಚನಾಯ್ಕರ್, ಚನ್ನಪ್ಪ ಜಗಲಿ, ಅಶ್ವಿನಿ ಅಂಕಲಕೋಟಿ, ಸುಮಾ ಚೋಟಗಲ್, ನಿಂಗಪ್ಪ ಬನ್ನಿ, ವಿರುಪಾಕ್ಷ ಆದಿ, ಸೋಮಣ್ಣ ಮುಳಗುಂದ, ಬಸವರಾಜ ಮೆಣಸಿನಕಾಯಿ, ಮಯೂರಗೌಡ ಪಾಟೀಲ, ಪ್ರಕಾಶ ಮುಳಗುಂದ, ಜಿ.ಎಸ್. ಗುಡಗೇರಿ, ರಾಮಣ್ಣ ಗೌರಿ, ನಂದೀಶ ಬಂಡಿವಾಡ, ಶಿವಯೋಗಿ ಅಂಕಲಕೋಟಿ, ಜಯಪ್ರಕಾಶ ಹೊಟ್ಟಿ, ಸೋಮಶೇಖರ ಕೆರಿಮನಿ, ನಾಗರಾಜ ಕಳಸಾಪೂರ, ಪ್ರಕಾಶ ಕೊಂಚಿಗೇರಿಮಠ ಸೇರಿದಂತೆ ಅನೇಕರಿದ್ದರು.