HomeEntertainmentಮುರಿದು ಬಿತ್ತು ಮತ್ತೊಂದು ಸೆಲೆಬ್ರಿಟಿ ದಾಂಪತ್ಯ ಜೀವನ: ಡಿವೋರ್ಸ್‌ ಮೊರೆ ಹೋದ ಖ್ಯಾತ ನಟ

ಮುರಿದು ಬಿತ್ತು ಮತ್ತೊಂದು ಸೆಲೆಬ್ರಿಟಿ ದಾಂಪತ್ಯ ಜೀವನ: ಡಿವೋರ್ಸ್‌ ಮೊರೆ ಹೋದ ಖ್ಯಾತ ನಟ

For Dai;y Updates Join Our whatsapp Group

Spread the love

ನಟ ಗೋವಿಂದ ಅವರ 37 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಗೋವಿಂದ ಅವರು ಪತ್ನಿ ಸುನೀತಾ ಅಹುಜಾ ಅವರಿಂದ ದೂರವಾಗಲು ನಿರ್ಧರಿಸಿದ್ದು,  ವಿಚ್ಛೇದನ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಈ ಬಗ್ಗೆ ದಂಪತಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಕೆಲ ತಿಂಗಳ ಹಿಂದೆ ನಟ ಗೋವಿಂದ ಮತ್ತು ಸುನೀತಾ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು. ಇಬ್ಬರ ಜೀವನಶೈಲಿಯಲ್ಲೂ ಹಲವು ವ್ಯತ್ಯಾಸಗಳಿದ್ದು, ಇದೇ ವಿಚಾರ ಆಗಾಗ ಇಬ್ಬರ ನಡುವೆ ಜಗಳಕ್ಕೂ ಕಾರಣವಾಗಿತ್ತು ಎನ್ನಲಾಗ್ತಿದೆ. ಹೀಗಾಗಿಯೇ ಇಬ್ಬರೂ ದೂರವಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ದಂಪತಿ ಹಲವು ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಇದೀಗ ಅಧಿಕೃತವಾಗಿ ದೂರವಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ನಾನು ಹಾಗೂ ಗೋವಿಂದ ಒಟ್ಟಿಗೆ ವಾಸಿಸುವುದಿಲ್ಲ ಎಂದು ಸುನೀತಾ ಹೇಳಿದ್ರು. ಗೋವಿಂದ ತನ್ನ ಮಕ್ಕಳೊಂದಿಗೆ ಒಂದು ಫ್ಲಾಟ್ ನಲ್ಲಿ ವಾಸಿಸುತ್ತಿದ್ದಾರೆ. ನಾನು ಅದೇ ಕಟ್ಟಡದ ಮತ್ತೊಂದು ಬಂಗಲೆಯಲ್ಲಿ ವಾಸಿಸುತ್ತಿದ್ದೇನೆ ಎಂದಿದ್ರು. ಇದೀಗ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎನ್ನಲಾಗ್ತಿದೆ.

‘ಮುಂದಿನ ಜನ್ಮದಲ್ಲಿ ಅವರು ನನ್ನ ಗಂಡ ಆಗಬಾರದು. ಅವರಿಗೆ ಹೊರಗೆ ಹೋಗುವುದು ಎಂದರೆ ಇಷ್ಟ ಇಲ್ಲ. ನಾನು ಸುತ್ತಾಡಲು ಬಯಸುತ್ತೇನೆ. ಅವರು ಯಾವಾಗಲೂ ಕೆಲಸದಲ್ಲಿ ಮುಳುಗಿರುತ್ತಾರೆ. ನಾವಿಬ್ಬರು ಜೊತೆಯಾಗಿ ಸಿನಿಮಾಗೆ ಹೋಗಿದ್ದೇ ನನಗೆ ನೆನಪಿಲ್ಲ’ ಎಂದು ಸುನೀತಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ಗೋವಿಂದ ಅವರ ವ್ಯವಸ್ಥಾಪಕ ಶಶಿ ಸಿನ್ಹಾ ಪ್ರತಿಕ್ರಿಯಿಸಿ, ಕುಟುಂಬದ ಕೆಲವು ಸದಸ್ಯರು ನೀಡಿದ ಕೆಲವು ಹೇಳಿಕೆಗಳಿಂದಾಗಿ ದಂಪತಿಗಳ ನಡುವೆ ಸಮಸ್ಯೆಗಳಿವೆ. ಅಂತಹ ಸಮಸ್ಯೆ ಇಲ್ಲ ಮತ್ತು ಗೋವಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಗೋವಿಂದಾ-ಸುನೀತಾ ಮಾರ್ಚ್ 1987 ರಲ್ಲಿ ವಿವಾಹವಾದರು. ಗೋವಿಂದಾ ಬಹಳ ಸಮಯದವರೆಗೆ ತನ್ನ ಮದುವೆಯ ವಿಷಯವನ್ನು ಮುಚ್ಚಿಟ್ಟಿದ್ದರು. ಈ ದಂಪತಿಗೆ ಟೀನಾ ಮತ್ತು ಯಶವರ್ಧನ್ ಅಹುಜಾ ಎಂಬ ಇಬ್ಬರು ಮಕ್ಕಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!