ಬೆಳಗಾವಿ ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳುವ ಘಟನೆ ನಡೆದಿದೆ. ಕೈ ಚೀಲದಲ್ಲಿ ಮಚ್ಚು ತೆಗೆದುಕೊಂಡು ಬಂದು ಆಸ್ಪತ್ರೆಗೆ ನುಗ್ಗಿ ನರ್ಸ್ ಮೇಲೆ ಪಾಗಲ್ ಪ್ರೇಮಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತನಿಂದ ಕೃತ್ಯ ನಡೆದಿದ್ದು, ನರ್ಸ್ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಾಲೋನಿಯಲ್ಲಿ ವಾಸವಿರುವ ಪ್ರಕಾಶ್ ನರ್ಸ್ ಗೆ ನಿತ್ಯ ಹಿಂಬಾಲಿಸುವುದು, ಮದುವೆ ಆಗುವಂತೆ ಪೀಡಿಸುತ್ತಿದ್ದನು. ಕೆಲ ದಿನಗಳ ಹಿಂದೆ ತನ್ನ ಕುಟುಂಬದ ಜೊತೆ ನರ್ಸ್ ಮನೆಗೆ ಹೋಗಿದ್ದ.
ನರ್ಸ್ ಕುಟುಂಬಸ್ಥರ ಬಳಿ ಮದುವೆ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದ. ಆದರೆ ಮದುವೆ ಮಾಡಿಕೊಡಲು ನರ್ಸ್ ಕುಟುಂಬಸ್ಥರು ನಿರಾಕರಿಸಿದ್ದರು. ಇದಾದ ಬಳಿಕವೂ, ಮದುವೆ ಆಗುವಂತೆ ನರ್ಸ್ ಬೆನ್ನುಬಿದ್ದದ್ದ ಪ್ರಕಾಶ್, ಆಕೆ ಸ್ಪಂದಿಸದಿದ್ದಾಗ ಆಸ್ಪತ್ರೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.