ಕದನ ವಿರಾಮದ ಮಧ್ಯೆಯೇ ಪಾಕ್ ನಲ್ಲಿ ಬುಗಿಲೆದ್ದ ಹಿಂಸಾಚಾರ: 10 ಮಂದಿ ಬಲಿ

0
Spread the love

ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ. ಈ ಎರಡು ಸಮುದಾಯಗಳ ನಡುವೆ ವಾರದ ಹಿಂದೆ ಜಗಳ ನಡೆದು ಹಲವರು ಮೃತಪಟ್ಟಿದ್ದರು. ಬಳಿಕ ಕದನ ವಿರಾಮ ಘೋಷಿಸಲಾಗಿತ್ತು. ಇದೀಗ ಕದನ ವಿರಾಮದ ನಡುವೆಯೂ ಎರಡು ಪ್ರ್ಯಾಂತ್ಯಗಳ ನಡುವೆ ಗಲಾಟೆ ನಡೆದಿದ್ದು ಘಟನೆಯಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾದ, ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಕುರ್ರಮ್ ಜಿಲ್ಲೆಯಲ್ಲಿ ಎರಡು ಬುಡಕಟ್ಟು ಸಮುದಾಯದ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ.ಘಟನೆಯಲ್ಲಿ 10 ಜನರ ಮೃತಪಟ್ಟಿದ್ದು 21 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರ ಈ ಎರಡು ಬುಡಕಟ್ಟುಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಟ 47 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದರು. ಬಳಿಕ ಭಾನುವಾರ ಪ್ರಾಂತೀಯ ಸರಕಾರ ಹಾಗೂ ಎರಡೂ ಬುಡಕಟ್ಟುಗಳ ಮುಖಂಡರ ನಡುವೆ ನಡೆದ ಮಾತುಕತೆಯಲ್ಲಿ ಒಂದು ವಾರದ ಕದನ ವಿರಾಮಕ್ಕೆ ಎರಡೂ ಬುಡಕಟ್ಟು ಸಮುದಾಯದವರು ಒಪ್ಪಿಕೊಂಡಿದ್ದರು. ಆದರೆ ಮಂಗಳವಾರ ತಡರಾತ್ರಿ ಮತ್ತೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಂತೀಯ ಸರ್ಕಾರದ ನಿಯೋಗ ಮತ್ತು ಎರಡೂ ಪಂಗಡಗಳ ಹಿರಿಯರ ನಡುವಿನ ಸಭೆಗಳ ನಂತರ ಭಾನುವಾರ ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಏಳು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು.


Spread the love

LEAVE A REPLY

Please enter your comment!
Please enter your name here